ರಾಮನಗರ:ವಸತಿ ಶಾಲೆಯ ನೀರಿನ ಟ್ಯಾಂಕ್ ಕುಸಿದು ಓರ್ವ ಬಾಲಕ ಸಾವನ್ನಪ್ಪಿ, ಮತ್ತೋರ್ವನಿಗೆ ಗಂಭೀರ ಗಾಯಗಳಾಗಿರುವ ಘಟನೆ ಚನ್ನಪಟ್ಟಣ ತಾಲ್ಲೂಕಿನ ಎಚ್.ಗೊಲ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ. ತಾಲೂಕಿನ ಗೊಲ್ಲಹಳ್ಳಿ ಗ್ರಾಮದಲ್ಲಿರುವ ಮೊರಾರ್ಜಿ ವಸತಿ ಶಾಲೆಯಲ್ಲಿ ಘಟನೆ ನಡೆದಿದ್ದು, 6 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಕೌಶಿಕ್ ಸಾವನ್ನಪ್ಪಿದ್ದಾನೆ.
ಹಾಸ್ಟೆಲ್ ಹೊರಗೆ ನೀರಿನ ಸಿಮೆಂಟ್ ಟ್ಯಾಂಕ್ ನಿರ್ಮಾಣ ಮಾಡಲಾಗಿತ್ತು. ಈ ಟ್ಯಾಂಕ್ಗೆ ನಲ್ಲಿಗಳನ್ನು ಅಳವಡಿಸಲಾಗಿತ್ತು. ವಿದ್ಯಾರ್ಥಿಗಳು ಬೆಳಗ್ಗೆ ಮುಖ ತೊಳೆದುಕೊಳ್ಳಲು ಇದೇ ಟ್ಯಾಂಕ್ ಬಳಿ ಹೋಗಿದ್ದಾರೆ. 30-40 ವಿದ್ಯಾರ್ಥಿಗಳು ಜೊತೆಯಲ್ಲಿ ಹೋಗಿ ಮುಖ ತೊಳೆದುಕೊಂಡು ಬಂದಿದ್ದಾರೆ. ನಂತರ ಕೌಶಿಕ್ ಹಾಗೂ ಸ್ನೇಹಿತ ಇಬ್ಬರೇ ಟ್ಯಾಂಕ್ ಬಳಿ ಹೋದಾಗ ಟ್ಯಾಂಕ್ನ ಎರಡು ಕಡೆಯ ಗೋಡೆ ಒಮ್ಮೆಲೆ ಕುಸಿದು ಇವರ ಮೇಲೆ ಬಿದ್ದಿದೆ.