ಕರ್ನಾಟಕ

karnataka

By

Published : Nov 5, 2019, 10:15 PM IST

ETV Bharat / state

ನೈಸಾಗಿ ಮಾತಾಡಿದ್ರೆ ಮರುಳಾಗ್ಬೇಡಿ, ಮಸಾಜ್​ ಮಾಡ್ತೀವಂತ ಮನೆಗೆ ಕರಿಸಿಕೊಂಡ ಈ ಲಲನೆಯರು ಮಾಡಿದ್ದೇ ಬೇರೆ

ಮಹಿಳೆಯರಿಂದ ಮಸಾಜ್ ಮಾಡಲಾಗುತ್ತದೆ ಎಂದು ಆನ್‌ಲೈನ್‌ನಲ್ಲಿ ಜಾಹೀರಾತುಗಳನ್ನು ನೀಡಿ ಸಂಪರ್ಕ ಸಂಖ್ಯೆಯನ್ನೂ ನಮೂಧಿಸಲಾಗುತ್ತಿತ್ತು. ನಂತರ ಇವರ ಸಂಪರ್ಕಕ್ಕೆ ಬಂದ ಗಿರಾಕಿಯನ್ನು ಮಸಾಜ್ ಮಾಡುವ ನೆಪದಲ್ಲಿ ಅಪಾರ್ಟ್‌ಮೆಂಟ್‌ಗೆ ಕರೆದುಕೊಂಡು ಹೋಗಿ ಅಲ್ಲಿ ದರೋಡೆ ಮಾಡಿ ವಾಪಾಸ್ ಕಳುಹಿಸಲಾಗುತ್ತಿತ್ತು.

ಮಸಾಜ್​ ಮಾಡುವ ನೆಪದಲ್ಲಿ ದರೋಡೆ

ರಾಮನಗರ: ಮಸಾಜ್ ಮಾಡುವ ನೆಪದಲ್ಲಿ ಆನ್‌ಲೈನ್ ಮೂಲಕ ಗಿರಾಕಿಗಳನ್ನು ಮನೆಗೆ ಕರೆಸಿಕೊಂಡು ದರೋಡೆ ಮಾಡುತ್ತಿದ್ದ 6 ಮಂದಿಯನ್ನು ಕುಂಬಳಗೂಡು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕೊಮ್ಮಘಟ್ಟದ ಅಪಾರ್ಟ್‌ಮೆಂಟ್​ನಲ್ಲಿ ಈ ದಂಧೆ ನಡೆಯುತ್ತಿದ್ದು, ಆರೋಪಿಗಳಾದ ಸುದರ್ಶನ್, ಚಂದನ್, ಚಂದ್ರು, ಲಕ್ಷ್ಮೀದೇವಿ, ಗೀತಾ ಮತ್ತು ಪಲ್ಲವಿ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.

ಮಸಾಜ್​ ಮಾಡುವ ನೆಪದಲ್ಲಿ ದರೋಡೆ

ಮಹಿಳೆಯರಿಂದ ಮಸಾಜ್ ಮಾಡಲಾಗುತ್ತದೆ ಎಂದು ಆನ್‌ಲೈನ್‌ನಲ್ಲಿ ಜಾಹೀರಾತುಗಳನ್ನು ನೀಡಿ ಸಂಪರ್ಕ ಸಂಖ್ಯೆಯನ್ನೂ ನಮೂಧಿಸಲಾಗುತ್ತಿತ್ತು. ನಂತರ ಇವರ ಸಂಪರ್ಕಕ್ಕೆ ಬಂದ ಗಿರಾಕಿಯನ್ನು ಮಸಾಜ್ ಮಾಡುವ ನೆಪದಲ್ಲಿ ಅಪಾರ್ಟ್‌ಮೆಂಟ್‌ಗೆ ಕರೆದುಕೊಂಡು ಹೋಗಿ ಅಲ್ಲಿ ದರೋಡೆ ಮಾಡಿ ವಾಪಾಸ್ ಕಳುಹಿಸಲಾಗುತ್ತಿತ್ತು. ಆದರೆ, ಮಹಿಳೆಯರಿಂದ ಮಸಾಜ್ ಮಾಡಿಸಿಕೊಳ್ಳಲು ಹೋಗಿ ದರೋಡೆಗೆ ಒಳಗಾಗಿದ್ದಾನೆ ಎಂದು ದೂರು ನೀಡಲು ಬಂದರೆ ಅವಮಾನವಾಗುತ್ತದೆ ಎನ್ನುವ ಕಾರಣಕ್ಕೆ ಯಾರೊಬ್ಬರೂ ದೂರು ನೀಡಲು ಮುಂದೆ ಬರುತ್ತಿರಲಿಲ್ಲ ಎಂಬುದೇ ಈ ಗ್ಯಾಂಗ್‌ನ ಪ್ಲಸ್ ಪಾಯಿಂಟ್ ಆಗಿತ್ತು. ವ್ಯಕ್ತಿಯೊಬ್ಬರು ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಅನೂಪ್ ಎ. ಶೆಟ್ಟಿ ತಿಳಿಸಿದ್ದಾರೆ.

ABOUT THE AUTHOR

...view details