ರಾಮನಗರ :ಕೆಹೆಚ್‌ಬಿ ಕಾಲೋನಿಯಲ್ಲಿನ ಹಾಡಹಗಲೇ ನಡೆದ ಸುಲಿಗೆ ಪ್ರಕರಣ ಇದೀಗ ಪೊಲೀಸರಿಗೂ ತಲೆನೋವಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ವಲಯ ಐಜಿಪಿ ಶರತ್ ಚಂದ್ರ ಸುಲಿಗೆ ನಡೆದ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ತಾವೇ ಸುಲಿಗೆ ಮಾಡಿದ್ದ ಮನೆಯವರಿಗೇ ಫೋನ್ ಮಾಡಿದ್ದ ಖದೀಮರು ಹೀಗೆ ಹೇಳೋದಾ.. - ಮನೆಗೆ ನುಗ್ಗಿ ಕಳ್ಳತನ ಮಾಡಿದ್ದ ನಾಲ್ಕು ಜನ ಯುವಕ
ಇದನ್ನ ಭಂಡಧೈರ್ಯವೋ ಅಥವಾ ಏನಾದ್ರೂ ಧಕ್ಕಿಸಿಕೊಳ್ತೀವಿ ಅನ್ನೋ ಅಪರಾಧ ಮನಸ್ಥಿತಿಯೋ ಗೊತ್ತಿಲ್ಲ. ಖದೀಮರು ಒಮ್ಮೆ ತಾವೇ ಸುಲಿಗೆ ಮಾಡಿದ್ದ ಮನೆಯವರಿಗೆ ಮತ್ತೆ ಫೋನ್ ಮಾಡಿ ಹೀಗೆ ಹೇಳಿದರು..
ಚನ್ನಪಟ್ಟಣ ಟೌನ್ ಕೆಹೆಚ್‌ಬಿ ಕಾಲೋನಿಯ ಉತ್ತೇಶ್, ಸುವರ್ಣ ಎಂಬುವರ ಮನೆಗೆ ನುಗ್ಗಿದ್ದ ನಾಲ್ಕು ಖದೀಮರು 60ಗ್ರಾಂ ಚಿನ್ನ, 10 ಸಾವಿರ ನಗದು ಮನೆಯವರಿಂದ ಸುಲಿಗೆ ಮಾಡಿದ್ದರು. ಬಳಿಕ ಮನೆಯವರಿಗೆಲ್ಲ ಬೆದರಿಕೆಯೊಡ್ಡಿದ್ದು, ನಾವು ಕೊಲೆ ಮಾಡಲು ಬಂದಿದ್ದೇವೆ. ಅದು ಮಿಸ್ಸಾಗಿದೆ ಅದರ ಬದಲಾಗಿ ಸಂದೇಶ ಮುಟ್ಟಬೇಕೆಂದು ಮನೆಗೆ ನುಗ್ಗಿದ್ದೇವೆ. ಈ ಕುರಿತು ಪೊಲೀಸರಿಗೆ ದೂರು ಕೊಡಿ ನಿಮ್ಮ ಹಣ ಮತ್ತು ಒಡವೆ ನಿಮಗೆ ಸಿಗುತ್ತೆ ಎಂದು ಹೇಳಿದ್ದರಂತೆ.
ಐಜಿಪಿ ಶರತ್‌ಚಂದ್ರ ಭೇಟಿ, ಪರಿಶೀಲನೆ:ಐಜಿಪಿ ಶರತ್‌ಚಂದ್ರ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಮನೆಯವರಿಗೆ ಧೈರ್ಯ ತುಂಬಿದರು. ಈ ಭಾಗದಲ್ಲಿ ಪೊಲೀಸ್ ಬೀಟ್ ವ್ಯವಸ್ಥೆ ಬಲಪಡಿಸಲಾಗುತ್ತದೆ. ನಿಮಗೆ ಆತಂಕ ಬೇಡ, ಜೊತೆಗೆ ಬೈಕ್ ಹಾಗೂ ಕಾರಿನಲ್ಲಿ ಪೊಲೀಸ್ ಪೆಟ್ರೋಲಿಂಗ್ ನಡೆಸುವುದಾಗಿ ಭರವಸೆ ನೀಡಿದರು.