ರಾಮನಗರ:ಸೂಕ್ತ ದಾಖಲೆ ಇಲ್ಲದೇ ಎಟಿಎಂ ವಾಹನದಲ್ಲಿ ಸಾಗಿಸುತ್ತಿದ್ದ ಸುಮಾರು 1 ಕೋಟಿ 97 ಲಕ್ಷ ರೂ. ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ರಾಮನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಾರೋಹಳ್ಳಿ ಹೋಬಳಿಯ ಗಂಡಕನದೊಡ್ಡಿ ಚೆಕ್ ಪೋಸ್ಟ್ನಲ್ಲಿ ಎಸ್ಎಸ್ಟಿ ತಂಡದ ಮುಖ್ಯಸ್ಥರು ವಾಹನ ತಪಾಸನೆ ನಡೆಸಿದ ವೇಳೆ ATM ಹಣ ವರ್ಗಾವಣೆ ವಾಹನದಲ್ಲಿ ಹಣ ಇರುವುದು ಪತ್ತೆಯಾಗಿದೆ.
ರಾಮನಗರ: ಅಕ್ರಮವಾಗಿ ಸಾಗಿಸುತ್ತಿದ್ದ ಕೋಟ್ಯಂತರ ರೂ. ಹಣ ವಶಕ್ಕೆ - ವಾಹನ ತಪಾಸನೆ
ವಿಧಾನಸಭಾ ಚುನಾವಣೆ ನೀತಿ ಸಂಹಿತೆ ಹಿನ್ನೆಲೆ ಎಲ್ಲಡೆ ಕಟ್ಟುನಿಟ್ಟಿನ ತನಿಖೆ ಜಾರಿಯಲ್ಲಿದೆ.
ಅಕ್ರಮವಾಗಿ ಸಾಗಿಸುತ್ತಿದ್ದ ಕೋಟ್ಯಾಂತರ ಹಣ ವಶಕ್ಕೆ ಪಡೆದ ಪೊಲೀಸರು
CMS info systems ಸಂಸ್ಥೆಯ ATM ಹಣ ವರ್ಗಾವಣೆ ವಾಹನವು ಚುನಾವಣಾ ಆಯೋಗ ಸೂಚಿಸಿದ ಮಾರ್ಗಸೂಚಿಗಳ ವಿರುದ್ಧವಾಗಿ ಸೂಕ್ತ ದಾಖಲೆಯಿಲ್ಲದೇ ಹಣ ವರ್ಗಾಯಿಸುತ್ತಿರುವುದು ಬೆಳಕಿಗೆ ಬಂದಿದೆ. ಮೇಲ್ನೋಟಕ್ಕೆ ಸೂಕ್ತ ದಾಖಲೆಗಳು ಇಲ್ಲದೇ ಇರುವುದು ಕಂಡು ಬಂದ ಕಾರಣ ರೂ. 1.97 ಕೋಟಿ ಮೊತ್ತವನ್ನು ಮುಟ್ಟುಗೋಲು ಹಾಕಿಕೊಂಡು ಕನಕಪುರ ತಾಲ್ಲೂಕು ಖಜಾನೆಯಲ್ಲಿ ಭದ್ರತೆ ಇಡಲಾಗಿದೆ.
ಇದನ್ನೂ ಓದಿ:ದಾಖಲೆ ಇಲ್ಲದ 10 ಲಕ್ಷ ಹಣ ಪತ್ತೆ: ಇಬ್ಬರನ್ನು ವಶಕ್ಕೆ ಪಡೆದ ಪೊಲೀಸರು