ರಾಮನಗರ: ಬಿಡದಿಯಿಂದ ಫಿಲ್ಮ್ ಸಿಟಿಯನ್ನ ನಮ್ಮ ಸರ್ಕಾರ ಸ್ಥಳಾಂತರ ಮಾಡಿಲ್ಲ. ನಾವು ರಾಮನಗರ ವಿಚಾರದಲ್ಲಿ ದ್ವೇಷ ರಾಜಕಾರಣ ಮಾಡುತ್ತಿಲ್ಲ. ಫಿಲ್ಮ್ ಸಿಟಿಯನ್ನ ಕನಕಪುರ ತಾಲೂಕಿನ ಹೊರ ವಲಯದಲ್ಲಿ ಮಾಡಲು ಚಿಂತನೆ ಮಾಡಲಾಗಿದೆ ಅಷ್ಟೇ ಎಂದು ಸಚಿವ ಸಿ. ಟಿ. ರವಿ ಸ್ಪಷ್ಟಪಡಿಸಿದ್ದಾರೆ.
ರಾಮನಗರ ವಿಚಾರದಲ್ಲಿ ದ್ವೇಷ ರಾಜಕಾರಣ ಮಾಡುತ್ತಿಲ್ಲ: ಸಿ.ಟಿ ರವಿ - ಕುಮಾರಸ್ವಾಮಿ
ಕುಮಾರಸ್ವಾಮಿ ಅವರು ಕೇವಲ ರಾಮನಗರ ತಾಲೂಕಿನ ನಾಯಕರಲ್ಲ. ಕುಮಾರಸ್ವಾಮಿ ತಾಲೂಕಿನ ನಾಯಕರಾದ್ರೆ, ಆ ಬಗ್ಗೆ ಅಷ್ಟೇ ಯೋಚನೆ ಮಾಡುತ್ತಾರೆ. ರಾಜ್ಯದ ನಾಯಕರಾದ್ರೆ ರಾಜ್ಯದ ಅಭಿವೃದ್ಧಿ ಬಗ್ಗೆ ಚಿಂತನೆ ಮಾಡುತ್ತಾರೆ ಎಂದು ಸಚಿವ ಸಿ.ಟಿ. ರವಿಯವರು ಮಾಜಿ ಸಿಎಂಗೆ ಟಾಂಗ್ ನೀಡಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಕೇವಲ ರಾಮನಗರ ತಾಲೂಕಿನ ನಾಯಕರಲ್ಲ. ಕುಮಾರಸ್ವಾಮಿ ತಾಲೂಕಿನ ನಾಯಕರಾದ್ರೆ, ಆ ಬಗ್ಗೆ ಅಷ್ಟೇ ಯೋಚನೆ ಮಾಡುತ್ತಾರೆ. ರಾಜ್ಯದ ನಾಯಕರಾದ್ರೆ ರಾಜ್ಯದ ಅಭಿವೃದ್ಧಿ ಬಗ್ಗೆ ಚಿಂತನೆ ಮಾಡುತ್ತಾರೆ ಎಂದು ಮಾಜಿ ಸಿಎಂಗೆ ಟಾಂಗ್ ನೀಡಿದ್ದಾರೆ.
ನೆರೆ ಸಂತ್ರಸ್ತರ ನೆರವಿಗೆ ಪ್ರಧಾನಿ ಮೋದಿ ಇದ್ದಾರೆ, ರಾಜ್ಯಕ್ಕೆ ಕೇಂದ್ರದ ಬರ ಪರಿಹಾರ ಹಣ ಬಂದೇ ಬರುತ್ತೆ. ಈ ವಿಚಾರದಲ್ಲಿ ರಾಜಕೀಯ ಮಾಡಬಾರದು. ಬೇಕಿದ್ರೆ ಜೆಡಿಎಸ್ 5 , ಕಾಂಗ್ರೆಸ್ ನವರು 10, ಬಿಜೆಪಿ 15, ಗ್ರಾಮಗಳನ್ನ ದತ್ತು ಪಡೆದು ಅಭಿವೃದ್ಧಿ ಪಡಿಸಲಿ ಎಂದು ಸಚಿವ ರವಿ ಹೇಳಿದ್ರು.