ಕರ್ನಾಟಕ

karnataka

ETV Bharat / state

ರಾಮನಗರದಲ್ಲೂ ಹೈಅಲರ್ಟ್.. ತಪಾಸಣೆಯಲ್ಲಿ ತೊಡಗಿರುವ ಪೊಲೀಸರು - ತಪಾಸಣೆ

ತಪಾಸಣೆ ನಡೆಸುತ್ತಿರುವ ಸಿಬ್ಬಂದಿ

By

Published : Aug 17, 2019, 9:12 PM IST

ರಾಮನಗರ :ಬೆಂಗಳೂರು ಸೇದಂತೆ ಹಲವು ನಗರಗಳಲ್ಲಿ ಹೈಅಲರ್ಟ್ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಸಿಲಿಕಾನ್ ಸಿಟಿ ಬೆಂಗಳೂರಿನ ಪಕ್ಕದ ರಾಮನಗರ ಜಿಲ್ಲೆಯಲ್ಲಿಯೂ ಹೈ ಅಲರ್ಟ್ ಇದ್ದು, ಕೆಲವೆಡೆ ತಪಾಸಣೆ ನಡೆಸಲಾಗುತ್ತಿದೆ.

ತಪಾಸಣೆ ನಡೆಸುತ್ತಿರುವ ಸಿಬ್ಬಂದಿ..

ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ಪ್ರವಾಸಿತಾಣ, ಸರ್ಕಾರಿ ಬಸ್ ನಿಲ್ದಾಣ ಸೇರಿದಂತೆ ಹಲವೆಡೆ ಬಾಂಬ್ ನಿಷ್ಕ್ರಿಯ ದಳ, ಶ್ವಾನದಳ ಸಿಬ್ಬಂದಿಯಿಂದ ತಪಾಸಣೆ ನಡೆಯುತ್ತಿದೆ. ಈ ಹಿಂದೆ ಬೆಂಗಳೂರು ಸರಣಿ ಸ್ಪೋಟಕ್ಕೂ ಮುನ್ನ ಟ್ರಯಲ್ ಎನ್ನುವಂತೆ ಚನ್ನಪಟ್ಟದಲ್ಲಿ ಟಿಫಿನ್‌ ಕ್ಯಾರಿಯರ್‌ನಲ್ಲಿ ಬಾಂಬ್​​​ ಸ್ಪೋಟಿಸಲಾಗಿತ್ತು. ಅಲ್ಲದೆ ಕಳೆದ ವರ್ಷ ಸೆರೆಸಿಕ್ಕಿದ್ದ ಉಗ್ರ ಮುನಿರ್ ಶೇಖ್ ಹಾಗೂ ಎರಡು ಜೀವಂತ ಬಾಂಬ್​​ಗಳು ಕೂಡ ರಾಮನಗರದಲ್ಲಿ ಪತ್ತೆಯಾಗಿದ್ದವು. ಇದಲ್ಲದೆ ಆತನ‌ ಬಾಮೈದುನ ಹಾಗೂ ಆತನ ಪತ್ನಿ ಕೂಡ ಶಂಕಿತರಾಗಿ, ಬಾಮೈದುನ ದೊಡ್ಡಬಳ್ಳಾಪುರದಲ್ಲಿ ಸೆರೆಸಿಕ್ಕಿಬಿದ್ದಿದ್ದ.

ಇವೆಲ್ಲವುದರ ಕಾರಣದಿಂದಾಗಿ ಇದನ್ನು ಸೂಕ್ಷ್ಮ ಪ್ರದೇಶ ಎಂದು ಗುರುತಿಸಿದ್ದು, ಈ ಹಿನ್ನೆಲೆಯಲ್ಲಿ ರಾಮನಗರ ಜಿಲ್ಲೆಯ ಪೊಲೀಸರು ಹೈಅಲರ್ಟ್ ಆಗಿದ್ದು, ವಿಶೇಷ ಗಮನಹರಿಸಿ ತಪಾಸಣೆ ನಡೆಸುತ್ತಿದ್ದಾರೆ.

ABOUT THE AUTHOR

...view details