ಕರ್ನಾಟಕ

karnataka

ETV Bharat / state

ಜೆಡಿಎಸ್ ಮಿಷನ್-123.. ಮಾಸ್ಟರ್ ಮೈಂಡ್ ನಾನೇ ಎಂದ ಮಾಜಿ ಸಿಎಂ ಹೆಚ್​ಡಿಕೆ

126 ಅಭ್ಯರ್ಥಿಗಳಿಗೆ ಎರಡು ದಿನಗಳ ಕಾರ್ಯಾಗಾರದಲ್ಲಿ 30 ಅಜೆಂಡಾಗಳನ್ನ ಕೊಡಲಾಗಿದೆ. ಗ್ರಾಪಂ ಮಟ್ಟದಲ್ಲಿ ಕಾರ್ಯಕ್ರಮವನ್ನ ನಿರೂಪಣೆ ಮಾಡುವ ಬಗ್ಗೆ ಗಮನ ಹರಿಸಲಾಗುತ್ತದೆ. ಮುಂದಿನ 3 ತಿಂಗಳ ಕಾಲ ಅವರ ಕಾರ್ಯವೈಖರಿಯನ್ನ ಗಮನಿಸಿ ಅಭ್ಯರ್ಥಿಯಾಗಿ ಘೋಷಣೆ ಮಾಡಲಾಗುವುದು..

HD Kumaraswamy on JDS Mission 123 in Ramangar
ಜೆಡಿಎಸ್ ಮಿಷನ್-123

By

Published : Sep 28, 2021, 10:20 PM IST

ರಾಮನಗರ :ಅಭ್ಯರ್ಥಿಗಳಿಗೆ ಜೆಡಿಎಸ್ ಮಿಷನ್-123 ಬಗ್ಗೆ ಹಾಗೂ ಪಂಚರತ್ನ ಕಾರ್ಯಕ್ರಮದ ಬಗ್ಗೆಯೂ ಮಾಹಿತಿ ತಿಳಿಸಿದ್ದೇವೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ. ಜಿಲ್ಲೆಯ ಬಿಡದಿಯಲ್ಲಿ ಎರಡನೇ ದಿನದ ಕಾರ್ಯಾಗಾರದ ಕುರಿತು ಮಾಜಿ ಸಿಎಂ ಹೆಚ್​ಡಿಕೆ ಮಾಹಿತಿ ನೀಡಿದ್ದಾರೆ.

ಸುಗುತ ಶ್ರೀನಿವಾಸ್ ರಾಜುರಿಂದ 2 ಗಂಟೆಗಳ ಕಾಲ ರಾಜ್ಯ-ರಾಷ್ಟ್ರದ ಬೆಳವಣಿಗೆ ಬಗ್ಗೆ ಮಾತನಾಡಿದ್ದಾರೆ. ಎಲ್ಲಾ ರೀತಿಯ ಮಾಹಿತಿಯನ್ನ ಅವರು ನೀಡಿದ್ದಾರೆ. ಜನತಾದಳದ ವಿಚಾರವಾಗಿ ಇರುವ ಸವಾಲುಗಳ ಬಗ್ಗೆ ಮಾಹಿತಿಯನ್ನ ಅವರು ಈಗಾಗಲೇ ನೀಡಿದ್ದಾರೆ.

126 ಅಭ್ಯರ್ಥಿಗಳಿಗೆ ಎರಡು ದಿನಗಳ ಕಾರ್ಯಾಗಾರದಲ್ಲಿ 30 ಅಜೆಂಡಾಗಳನ್ನ ಕೊಡಲಾಗಿದೆ. ಗ್ರಾಪಂ ಮಟ್ಟದಲ್ಲಿ ಕಾರ್ಯಕ್ರಮವನ್ನ ನಿರೂಪಣೆ ಮಾಡುವ ಬಗ್ಗೆ ಗಮನ ಹರಿಸಲಾಗುತ್ತದೆ. ಮುಂದಿನ 3 ತಿಂಗಳ ಕಾಲ ಅವರ ಕಾರ್ಯವೈಖರಿಯನ್ನ ಗಮನಿಸಿ ಅಭ್ಯರ್ಥಿಯಾಗಿ ಘೋಷಣೆ ಮಾಡಲಾಗುವುದು ಎಂದರು.

ಹಾಗೆಯೇ ನಾಳೆ ಮಹಿಳೆಯರ ತರಬೇತಿ ಕಾರ್ಯಾಗಾರ ಇದೆ. ಅವರಿಗೆ ಹೆಚ್ಚಿನ ಅವಕಾಶ ಕೊಡಬೇಕಿದೆ. ನಾಳೆ ಅತ್ಯುತ್ತಮವಾದ ಮಾರ್ಗದರ್ಶನ ಮಹಿಳೆಯರಿಗೆ ಕೊಡಲಾಗುತ್ತದೆ ಎಂದರು.

ಇದಲ್ಲದೆಯೇ ರಾಜ್ಯದ ನೀರಾವರಿ ಯೋಜನೆಗಳ ಬಗ್ಗೆಯೂ ಚಿಂತನೆ ನಡೆಸಿದ್ದೇವೆ.‌ ಮೇಕೆದಾಟು, ಯುಕೆಪಿ, ಎತ್ತಿನಹೊಳೆ, ಮಹಾದಾಯಿ ಯೋಜನೆಗಳ ಬಗ್ಗೆಯೂ ಹೋರಾಟ ಮಾಡುತ್ತೇವೆ. ಪ್ರಾದೇಶಿಕ ಪಕ್ಷ, ರಾಷ್ಟ್ರೀಯ ಪಕ್ಷಗಳ ನಿಲುವುಗಳ ವಿರುದ್ಧವೂ ಹೋರಾಡುವ ವಿಚಾರ ಮಂಡನೆ ಮಾಡಲಾಗಿದೆ ಎಂದು ತಿಳಿಸಿದರು.

ಇವತ್ತಿನ ಕಾರ್ಯಾಗಾರದಲ್ಲಿ ಈ ವಿಚಾರ ಮಂಡನೆ ಮಾಡಲಾಗಿದೆ. ರೈತ ಸಾಲ ಮಾಡದೇ, ಸರ್ಕಾರದ ಮೂಲಕವೇ ಕೃಷಿ ಚಟುವಟಿಕೆ ಬಗ್ಗೆ ಗಮನಹರಿಸಿದ್ದೇವೆ. ವಸತಿ ಯೋಜನೆ, ಯುವಕರಿಗೆ ಉದ್ಯೋಗ ಹಾಗೂ ಇತರೆ ಜನಪರ ಯೋಜನೆ ಬಗ್ಗೆ ವಿಚಾರ ಮಂಡನೆಯಾಗಿದೆ. ಮಹಿಳೆಯರ ವಿಚಾರದಲ್ಲಿ ಹಲವು ಯೋಜನೆಗಳ ಬಗ್ಗೆ ಚರ್ಚೆ ಮಾಡಲಾಗಿದೆ.

ಹಿರಿಯ ನಾಗರಿಕರ ಬಗ್ಗೆಯೂ ಹಲವು ಕಾರ್ಯಕ್ರಮದ ಬಗ್ಗೆ ಚರ್ಚೆಯಾಗಿದೆ. ನಮ್ಮ ಪಕ್ಷದ ಕಾರ್ಯಕ್ರಮಗಳನ್ನ ರಾಜ್ಯದ ಪ್ರತಿ ಮನೆಗೂ ತಲುಪಿಸಲಾಗುತ್ತದೆ ಎಂದರು. ಇದಲ್ಲದೆ ರಾಜ್ಯಕ್ಕೆ ಪ್ರಾದೇಶಿಕ ಪಕ್ಷ ಜೆಡಿಎಸ್​ನ ಅವಶ್ಯಕತೆ ಇದೆ. ಕಾಂಗ್ರೆಸ್-ಬಿಜೆಪಿ ಪಕ್ಷಗಳ ಆಡಳಿತ ನೋಡಿ ಆಗಿದ್ದು, ‌ಮುಂದಿನ 17 ತಿಂಗಳು ರಾಜ್ಯದ ಜನರಿಗೆ ನಮ್ಮ ಪಕ್ಷದ ಯೋಜನೆಗಳನ್ನ ತಿಳಿಸಲಾಗುತ್ತದೆ.

ಮಿಷನ್-123 ಮಾಸ್ಟರ್ ಮೈಂಡ್ ನಾನೇ ಆಗಿದ್ದೇನೆ. ಕಾಲೇಜು ದಿನಗಳಲ್ಲಿ ನಾನು ಕೊನೆ ಬೆಂಚ್ ವಿದ್ಯಾರ್ಥಿಯಾಗಿದ್ದೆ. ಆದರೆ, ಪಕ್ಷದ ವಿಚಾರದಲ್ಲಿ ಇವತ್ತು ನಾನೇ ಟೀಚಿಂಗ್ ಮಾಡಿದ್ದೇನೆ.‌ 30 ಟಾಸ್ಕ್ ನ ಪ್ರಾಮಾಣಿಕವಾಗಿ ಯಶಸ್ವಿಯಾದವರಿಗೆ ಪಕ್ಷದ ಟಿಕೆಟ್ ನೀಡಲಾಗುವುದು ಎಂದರು.

ABOUT THE AUTHOR

...view details