ರಾಮನಗರ: ಕಾಡಾನೆ ದಾಳಿಯಿಂದ ಮಹಿಳೆ ಸಾವಿಗೀಡಾಗಿರುವುದು ಶೋಚನೀಯ. ವನ್ಯಜೀವಿ ದಾಳಿ ತಡೆಗೆ ನಾನು ಹಲವು ಸಭೆ ನಡೆಸಿ ಶಾಶ್ವತ ಪರಿಹಾರಕ್ಕೆ ಸೂಚನೆ ನೀಡಿದ್ದೇನೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದರು. ಇತ್ತೀಚೆಗೆ ಚನ್ನಪಟ್ಟಣದಲ್ಲಿ ಕಾಡಾನೆ ದಾಳಿಗೆ ಮಹಿಳೆಯ ಸಾವಿಗೆ ಸಂತಾಪ ಸೂಚಿಸಿದ ನಂತರ ಅವರು ಮಾತನಾಡಿದರು.
ಡಿಸಿ ಕಚೇರಿಯಲ್ಲಿ, ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ಕೂಡ ಸಭೆ ನಡೆಸಿದ್ದು, ನನ್ನ ಮನವಿ ಮೇರೆಗೆ ಕಾಡಾನೆ ಸಾಗಹಾಕುವ ನಿಟ್ಟಿನಲ್ಲಿ ಕ್ರಮ ಜರುಗಿಸಲಾಗುವುದು. ಬಂಡಿಪುರದಿಂದ ಸಾಕಾನೆಗಳನ್ನು ತಂದು ಓಡಿಸಲು ಕ್ರಮ ಕೈಗೊಂಡು ನಿರಂತರವಾಗಿ 15-20 ಕಾಡಾನೆಗಳ ಹಾವಳಿ ತಪ್ಪಿಸಲು ನಿರ್ಧಾರ ಕೈಗೊಳ್ಳಲಾಗಿದೆ. ಮಾವುತರ ಪ್ರತಿಭಟನೆ ಹಿನ್ನೆಲೆಯಲ್ಲಿ ಆನೆಗಳನ್ನು ಕಾಡಿಗೆ ಕಳಿಸುವುದು ತಡವಾಗಿದೆ ಎಂದರು.
ಅಶ್ವತ್ಥ್ ನಾರಾಯಣ್ ವಿರುದ್ಧ ಕಿಡಿ:ಪಂಚತಾರಾ ಹೋಟೆಲ್ನಲ್ಲಿ ಹೆಚ್ಡಿಕೆ ಉಳಿದುಕೊಳ್ಳುತ್ತಾರೆ ಎಂದು ಏನೇನೋ ಮಾತನಾಡುತ್ತಾರೆ. ಈಗ ದೆಹಲಿಯಿಂದ ಬರುವ ಅಮಿತ್ ಶಾ, ನಡ್ಡಾ, ಅರುಣ್ ಸಿಂಗ್ ಎಲ್ಲಿ ಹಾಲ್ಟ್ ಮಾಡ್ತಾರೆ. ಹಾಗಿದ್ರೆ ಅವರು ಆ ಹೋಟೆಲ್ಗೆ ಹೋಗಬಹುದಾ? ಕುಮಾರಸ್ವಾಮಿ ಹೋದ್ರೆ ತಪ್ಪಾ? ಎಂದು ಕೇಳಿದರು.