ರಾಮನಗರ :ಎಲ್ಲಾ ವಿಶ್ವವಿದ್ಯಾಲಯಗಳ ಸಿಂಡಿಕೇಟ್ಗಳಲ್ಲಿ ಆರ್ಎಸ್ಎಸ್ ಕಾರ್ಯಕರ್ತರನ್ನು ಸದಸ್ಯರನ್ನಾಗಿ ಮಾಡಿಕೊಂಡಿದ್ದಾರೆ. ಯೂನಿವರ್ಸಿಟಿಯಲ್ಲಿ ಕೆಲಸ ಆಗಬೇಕೆಂದರೆ ಸಿಂಡಿಕೇಟ್ ಸದಸ್ಯರು ಲಕ್ಷ ಲಕ್ಷ ಹಣ ಕೇಳುತ್ತಾರೆ. 40 ವರ್ಷದ ಹಿಂದಿನ ಆರ್ಎಸ್ಎಸ್ ಬೇರೆ, ಇವತ್ತಿನ ಆರ್ಎಸ್ಎಸ್ ಬೇರೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ.
RSS ವಿರುದ್ಧ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿರುವುದು.. ಜಿಲ್ಲೆಯ ಚನ್ನಪಟ್ಟಣ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಿಜಯದಶಮಿಯ ದಿನದಂದು ಆರ್ಎಸ್ಎಸ್ ಅಧ್ಯಕ್ಷ ಭಾಗವತ್ ಅವರು ಎಲ್ಲಾ ಹಿಂದೂ ದೇವಾಲಯಗಳನ್ನು ಆರ್ಎಸ್ಎಸ್ ಸುಪರ್ದಿಗೆ ನೀಡಿ ಎಂದು ಹೇಳಿಕೆ ನೀಡಿದ್ದಾರೆ. ಆರ್ಎಸ್ಎಸ್ನವರೇನು ಹಿಂದೂ ದೇವಾಲಯಗಳನ್ನು ಗುತ್ತಿಗೆ ಹಾಕಿಕೊಂಡಿದ್ದಾರಾ ಎಂದು ಪ್ರಶ್ನಿಸಿದದರು.
89 ರಿಂದ 91ರವರೆಗೆ ರಾಮಮಂದಿರ ನಿರ್ಮಾಣಕ್ಕಾಗಿ ಅಡ್ವಾಣಿಯವರು ರಥಯಾತ್ರೆ ಮಾಡಿ ಇಟ್ಟಿಗೆ ಮತ್ತು ಹಣ ಸಂಗ್ರಹ ಮಾಡಿದರು. ಅದರ ಲೆಕ್ಕ ಇಲ್ಲ. ಮತ್ತೆ ಇದೀಗ ರಾಮಮಂದಿರ ಹೆಸರಿನಲ್ಲಿ ಹಣ ಸಂಗ್ರಹ ಮಾಡಿದ್ದಾರೆ. ಆ ಹಣವನ್ನು ಎಲ್ಲಿ ಇಟ್ಟಿದ್ದಾರೆ, ಯಾರು ಲೆಕ್ಕ ಕೊಡುತ್ತಾರೆ. ರಾಮನ ಹೆಸರಿನಲ್ಲಿ ಕೂಡ ಹಣದ ಅವ್ಯವಹಾರ ನಡೆದಿದೆ ಎಂದು ಗಂಭೀರ ಆರೋಪ ಮಾಡಿದರು.
ರಾಮಮಂದಿರ ನಿರ್ಮಾಣದ ವಿಚಾರ ಹಾಗೂ ರಾಮನ ಹೆಸರಿನಲ್ಲಿ ಹಣ ದುರುಪಯೋಗವಾಗಿದೆ. ಜನರಿಂದ ಸಂಗ್ರಹಿಸಿದ ಹಣದ ಬಗ್ಗೆ ಯಾರು ಲೆಕ್ಕ ಕೊಟ್ಟಿದ್ದಾರೆ ಎಂದ ಅವರು, ಬಿಜೆಪಿ ನಡೆಸಿರುವ ಹಣದ ದುರುಪಯೋಗದ ಬಗ್ಗೆ ವಿವರಿಸಿದರು.
ಇದನ್ನೂ ಓದಿ: 2012ರ ಚುನಾವಣೆಯಲ್ಲಿ ಎಷ್ಟರಮಟ್ಟಿಗೆ ಸಿದ್ದರಾಮಯ್ಯ ಅಲ್ಪಸಂಖ್ಯಾತ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದರು?: ಹೆಚ್ಡಿಕೆ ಪ್ರಶ್ನೆ