ರಾಮನಗರ:ಮಾಜಿ ಸಚಿವಡಿ ಕೆ ಶಿವಕುಮಾರ್ ಅವರು ಗುಜರಾತ್ ಶಾಸಕರನ್ನು ರೆಸಾರ್ಟ್ನಲ್ಲಿ ಇಟ್ಟಿದ್ದಾಗ ಅಮಿತ್ ಶಾ ಕರೆ ಮಾಡಿ ಶಾಸಕರನ್ನು ಕಳುಹಿಸಿಕೊಡುವಂತೆ ಹೇಳಿದ್ದರು. ಅಮಿತ್ ಶಾ ಮಾತಿಗೆ ಕಿಮ್ಮತ್ತು ನೀಡದ ಕಾರಣ ಅದಕ್ಕೆ ಪ್ರತೀಕಾರವಾಗಿ ಡಿಕೆಶಿ ಮೇಲೆ ಜಾರಿ ನಿರ್ದೇಶನಾಲಯದ (ಇಡಿ)ಅಧಿಕಾರಿಗಳು ದಾಳಿ ನಡೆಸಿದ್ದರು ಎಂದು ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಸಿ ಎಂ ಲಿಂಗಪ್ಪ ಹೊಸ ಬಾಂಬ್ ಸಿಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಮಿತ್ ಶಾ ಅಂದು ಮೂವರು ಶಾಸಕರನ್ನು ಬಿಟ್ಟುಕಳುಹಿಸುವಂತೆ ಕೇಳಿದ್ದರು. ಶಾ ಬೇಡಿಕೆ ಈಡೇರಿಸದೇ ಇದ್ದದ್ದಕ್ಕೆ ರೆಸಾರ್ಟ್ನಲ್ಲಿದ್ದಾಗಲೇ ಡಿಕೆಶಿ ಅವರ ಮೇಲೆ ದಾಳಿ ನಡೆಸಿದ್ದರು. ಇದು ಬಿಜೆಪಿಯವರ ದ್ವೇಷ ರಾಜಕಾರಣವನ್ನು ಸೂಚಿಸುತ್ತದೆ. ಡಿಕೆಶಿ ಅವರ ಸಹೋದರ, ಪತ್ನಿ ಹಾಗೂ ತಾಯಿ ಅವರಿಗೆ ಕಿರುಕುಳ ನೀಡಲಾಗಿದೆ. ಗುಜರಾತ್ ಶಾಸಕರನ್ನ ಕಾಪಾಡಿದ್ದೆ, ಅವರಿಗಿಂದು ಮುಳುವಾಗಿದೆ ಎಂದು ಹೇಳಿದರು.