ಕರ್ನಾಟಕ

karnataka

ETV Bharat / state

ಬಿಎಸ್​ವೈ ಪರ ದೇವೇಗೌಡರ ಹೇಳಿಕೆ ಸ್ವಾಗತಿಸುತ್ತೇನೆ: ಸಚಿವ ಸಿ.ಟಿ.ರವಿ

ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಅನುಭವಿ ರಾಜಕಾರಣಿ. ಅವರು ಯಾವ ಹಿನ್ನೆಲೆಯಲ್ಲಿ ಹಾಗೆ ಹೇಳಿದ್ದಾರೋ ಅದನ್ನು ಅನುಮಾನದಿಂದ ನೋಡುವುದಿಲ್ಲ. ಯಡಿಯೂರಪ್ಪ ಪರ ದೇವೇಗೌಡರ ಹೇಳಿಕೆಯನ್ನ ಸ್ವಾಗತಿಸುತ್ತೇನೆ ಎಂದು ಸಚಿವ ಸಿ.ಟಿ.ರವಿ ಹೇಳಿದ್ದಾರೆ.

ಸಚಿವ ಸಿ.ಟಿ.ರವಿ

By

Published : Nov 6, 2019, 3:21 PM IST

ರಾಯಚೂರು:ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಅನುಭವಿ ರಾಜಕಾರಣಿ. ಅವರು ಯಾವ ಹಿನ್ನೆಲೆಯಲ್ಲಿ ಹಾಗೆ ಹೇಳಿದ್ದಾರೋ ಅದನ್ನು ಅನುಮಾನದಿಂದ ನೋಡುವುದಿಲ್ಲ. ಯಡಿಯೂರಪ್ಪ ಪರ ದೇವೇಗೌಡರ ಹೇಳಿಕೆಯನ್ನ ಸ್ವಾಗತಿಸುತ್ತೇನೆ ಎಂದು ಸಚಿವ ಸಿ.ಟಿ.ರವಿ ಹೇಳಿದ್ದಾರೆ.

ಬಿಎಸ್​ವೈ ಪರ ದೇವೇಗೌಡರ ಹೇಳಿಕೆ ಸ್ವಾಗತಿಸುತ್ತೇನೆ: ಸಚಿವ ಸಿ.ಟಿ.ರವಿ

ಬಿಎಸ್‌ವೈಗೆ ಹೆಚ್.ಡಿ‌.ದೇವೇಗೌಡರು ಕರೆ ಮಾಡಿದ್ದಾರೆ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅನರ್ಹರ ಪ್ರಕರಣ ಸುಪ್ರೀಂಕೋರ್ಟ್‌ನಲ್ಲಿದೆ. ಹೀಗಾಗಿ ಅದರ ತೀರ್ಪು ಬರುವವರೆಗೆ ಕಾಯಬೇಕಾಗಿದೆ. ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸುಭದ್ರವಾಗಿದೆ. ರಾಜ್ಯದಲ್ಲಿ ಚುನಾವಣೆ ನಡೆದರೆ ಹೆಚ್ಚಿನ ಸ್ಥಾನ ಬಿಜೆಪಿ ಗೆಲ್ಲುತ್ತದೆ. ಸಿಎಂ ಯಡಿಯೂರಪ್ಪನವರ ನೇತೃತ್ವದ ಆಡಳಿತ ಮುಂದುವರೆಯಲಿದೆ. ಈ ವಿಚಾರದಲ್ಲಿ ಯಡಿಯೂರಪ್ಪ ಪರ ದೇವೇಗೌಡರ ಹೇಳಿಕೆ ಸ್ವಾಗತಿಸುತ್ತೇನೆ ಎಂದರು.

ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಸರ್ಕಾರ ಉರುಳಿಸಲು ಏನೇನು ಮಾಡಿದ್ರು ಎನ್ನುವ ಸಂಗತಿಯನ್ನ ಸನ್ನಿವೇಶ ಬಂದ್ರೆ ಬಿಚ್ಚಡಬೇಕಾಗುತ್ತದೆ. ಪ್ರಥಮ ಬಾರಿಗೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ರಾಮಕೃಷ್ಣ ಹೆಗಡೆ ಸಿಎಂ ಆಗಿದ್ದರು. ಆಗ ವೀರಪ್ಪ ಮೊಯ್ಲಿ ಮತ್ತು ಸಿ.ಬೈರೆಗೌಡರ ಆಡಿಯೋ ಕ್ಯಾಸೆಟ್ ಬಿಡುಗಡೆಯಾಯ್ತು. ಹಾಗಿದ್ದರೆ ಆಗ ಕಾಂಗ್ರೆಸ್​​ನವರ ರಾಜಕಾರಣ ಸರಿಯೇ ಎಂದು ಪ್ರಶ್ನಿಸಿದ್ರು.

ಇನ್ನು, ಜನತಾದಳದ ಆರು ಜನ ಶಾಸಕರನ್ನ, ಜೆಡಿಯುನ ಅನೇಕರನ್ನು ತಮ್ಮ ಪಕ್ಷಕ್ಕೆ ಕರೆಕೊಂಡಿದ್ದು ಯಾವ ರಾಜಕಾರಣ. ಚಲುವರಾಯಸ್ವಾಮಿ, ಮಾಗಡಿ ಬಾಲಕೃಷ್ಣ, ಅಖಂಡ ಶ್ರೀನಿವಾಸಮೂರ್ತಿ, ಜಮೀರ್ ಅಹ್ಮದ್, ಶ್ರೀನಿವಾಸಮೂರ್ತಿ ಇವರೆಲ್ಲಾ ಯಾವ ಪಕ್ಷದಲ್ಲಿದ್ದರು ಎನ್ನುವುದು ಮನವರಿಕೆ ಮಾಡಿಕೊಳ್ಳಬೇಕಾಗಿದೆ.

ಈಗ ಬಿಜೆಪಿಯರಿಗೆ ನೈತಿಕತೆ ಇಲ್ಲ ಅಂತಾರೆ. ಅವರ ಪಕ್ಷದಲ್ಲಿ ಮಾತ್ರ ಗರತಿಯರು ಇರೋರು. ಮಾಜಿ ಸಚಿವ ಸಿಎಂ ಇಬ್ರಾಹಿಂಗಿಂತ ಗರತಿ ಬೇಕಾ. ಡಿಸಿಎಂ ಆಗಿದ್ದಾಗಲೇ ಅದೇ ಪಕ್ಷದ ವಿರುದ್ಧ ಬಂಡಾಯ ಸಾರಿದ್ದು ಗರತಿ ರಾಜಕಾರಣವೇ. ಮುಳ್ಳನ್ನು ಮುಳ್ಳಿನಿಂದ ತೆಗೆಯುವ ರಾಜಕಾರಣ ಮಾಡಿದ್ದೇವೆ. ಇನ್ನು ಮುಂದೆ ಮಾಡ್ತೇವೆಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ರು.

ABOUT THE AUTHOR

...view details