ಕರ್ನಾಟಕ

karnataka

By

Published : Jan 4, 2020, 9:51 AM IST

Updated : Jan 4, 2020, 10:19 AM IST

ETV Bharat / state

14ನೇ ಹಣಕಾಸಿನ ಯೋಜನೆ ಅನುದಾನ ದುರ್ಬಳಕೆ ಆರೋಪ: ಗ್ರಾಪಂನ 15 ಸದಸ್ಯರ ಸದಸ್ಯತ್ವ ರದ್ದು

ರಾಯಚೂರು ಗ್ರಾಮ ಪಂಚಾಯ್ತಿ ಹಣ ದುರುಪಯೋಗ ಮಾಡಿಕೊಂಡ ಆರೋಪದ ಮೇಲೆ 15 ಜನ ಸದಸ್ಯರ ಸದಸ್ಯತ್ವವನ್ನ ರದ್ದುಗೊಳಿಸಿ ಆದೇಶ ಹೊರಡಿಸಲಾಗಿದೆ.

gp
ಗ್ರಾಮ ಪಂಚಾಯ್ತಿ ಸದಸ್ಯರ ಸದಸ್ಯತ್ವ ರದ್ದು

ರಾಯಚೂರು: ಗ್ರಾಮ ಪಂಚಾಯ್ತಿ ಹಣ ದುರುಪಯೋಗ ಮಾಡಿಕೊಂಡ ಆರೋಪದ ಮೇಲೆ 15 ಜನ ಸದಸ್ಯರ ಸದಸ್ಯತ್ವವನ್ನ ರದ್ದುಗೊಳಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ ರಾಜ್ ಇಲಾಖೆ ಅಧೀನ ಕಾರ್ಯದರ್ಶಿ ಆದೇಶಿಸಿದ್ದಾರೆ.

ಗ್ರಾಮ ಪಂಚಾಯ್ತಿ ಸದಸ್ಯರ ಸದಸ್ಯತ್ವ ರದ್ದು

14ನೇ ಹಣಕಾಸು ಯೋಜನೆ ಅನುದಾನ ಹಣವನ್ನ ವೈಯಕ್ತಿಕವಾಗಿ ಬಳಕೆ ಮಾಡಿಕೊಂಡ ಆರೋಪದ ಮೇಲೆ ಗ್ರಾಪಂ ಅಧ್ಯಕ್ಷೆ, ಉಪಾಧ್ಯಕ್ಷೆ ಸೇರಿ ಒಟ್ಟು 15 ಜನ ಸದಸ್ಯರ ಸದಸ್ಯತ್ವ ರದ್ದುಗೊಳಿಸುವ ಮೂಲಕ ಆದೇಶ ಹೊರಡಿಸಲಾಗಿದೆ. ಬಿಚ್ಚಾಲಿ ಗ್ರಾಮ ಪಂಚಾಯ್ತಿ 2016-2017ನೇ ಸಾಲಿನಲ್ಲಿ 14ನೇ ಹಣಕಾಸು ಯೋಜನೆಯಡಿ ಅನುದಾನದ ಚೆಕ್​ಗಳನ್ನು ಸದಸ್ಯರು ತಮ್ಮ ಪತಿ, ಮಾವ, ವೈಯಕ್ತಿಕವಾಗಿ ಪಡೆದುಕೊಂಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ತನಿಖೆ ನಡೆಸಿದ ಬಳಿಕ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, 2018 ಡಿ.14ರಂದು ವರದಿಯನ್ನ ಪ್ರಾದೇಶಿಕ ಆಯುಕ್ತರಿಗೆ ಸಲ್ಲಿಸಿದ್ದಾರೆ. ವರದಿ ಆಧರಿಸಿ ಪ್ರಾದೇಶಿಕ ಆಯುಕ್ತರು 15 ಜನರ ಸದಸ್ಯತ್ವ ರದ್ದುಗೊಳಿಸುವಂತೆ ಸರಕಾರಕ್ಕೆ ಶಿಫಾರಸು ಮಾಡಿದ್ದರು.

ಗ್ರಾಮ ಪಂಚಾಯ್ತಿ ಸದಸ್ಯರ ಸದಸ್ಯತ್ವ ರದ್ದು

ಈ ಶಿಫಾರಸಿನ ಆಧಾರದ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 43(ಎ)ರ ಅಡಿಯಲ್ಲಿ ಸದಸ್ಯತ್ವವನ್ನ ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಗೊಳಿಸಲಾಗಿದೆ. ಗ್ರಾ.ಪಂ. ಸದ್ಯಸರುಗಳಾದ ಮಲ್ಲೇಶ ಹನುಮಂತ 9400 ರೂ., ವೀರನಗೌಡ 17,200 ರೂ., ಹನುಮಂತ 8000 ರೂ., ಕಾಮಾಕ್ಷಮ್ಮ ಕುಬೇರಪ್ಪ 10,900 ರೂ., ಜಯಶೀಲ 3600 ರೂ. ಪಡೆದುಕೊಂಡಿದ್ದಾರಂತೆ. ಉಳಿದ 3 ಸಾವಿರ ಹಣವನ್ನ ಸಹ ಮರಳಿ ಖಾತೆಗೆ ಜಮಾ ಮಾಡಿಲ್ಲ ಎನ್ನಲಾಗಿದೆ. ಕರಿಬಸಪ್ಪ 16,700 ರೂ., ರಮೇಶ್ 3100 ರೂ., ದೌಲತ್ ಸಾಬ್ 4800 ರೂ. ಚೆಕ್ ಪಡೆದ್ದುಕೊಡಿದ್ರಂತೆ. ಇದನ್ನ ವಾಪಸ್ ಡಿಡಿ ಮೂಲಕ ನೀಡುವುದಾಗಿ ತಿಳಿಸಿದ್ರು. ಇನ್ನುಳಿದ ಏಳು ಜನರು ಚೆಕ್ ಮೂಲಕ ಪಂಚಾಯ್ತಿ ಅಧ್ಯಕ್ಷೆ ಮಹಾಂತಮ್ಮ 4500 ರೂ., ಉಪಾಧ್ಯಕ್ಷ ಯಲ್ಲಮ್ಮ 4900 ರೂ., ಪಾರ್ವತಮ್ಮ 4900 ರೂ., ಸುಜಾತ 8900 ರೂ., ಅಮೀನಾ ಬೇಗಂ 4500 ರೂ., ಸುಶೀಲಮ್ಮ 6000 ರೂ., ಹಣ ಪಡೆದಿರುವುದು ಖಾತರಿಯಾಗಿರುವ ಹಿನ್ನೆಲೆಯಲ್ಲಿ ಸದಸ್ಯತ್ವ ರದ್ದುಗೊಳಿಸಲಾಗಿದೆ.

Last Updated : Jan 4, 2020, 10:19 AM IST

For All Latest Updates

TAGGED:

ABOUT THE AUTHOR

...view details