ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕಿನಲ್ಲಿ ಕುರಿ ಹಾಗೂ ಆಡುಗಳ ಕಳ್ಳರ ಹಾವಳಿ ಜೋರಾಗಿದೆ. ಬುಧವಾರ ರಾತ್ರಿ 30 ಕುರಿಗಳು ಹಾಗೂ 12 ಆಡುಗಳು (ಮೇಕೆ)ಯನ್ನು ವಾಹನದಲ್ಲಿ ತುಂಬಿಕೊಂಡು ಖದೀಮರು ಪರಾರಿಯಾಗಿದ್ದಾರೆ. ಹೊಸೂರು ಗ್ರಾಮದ ಸಾಬಣ್ಣ ಬಸಪ್ಪ ನೀರಲಕೇರಿ ಎಂಬ ರೈತ ತನ್ನ ಕುರಿಗಳನ್ನು ದೊಡ್ಡಿಯಲ್ಲಿ ಕಟ್ಟಿ ಹಾಕಿ ಮಲಗಿದ್ದರು.
ತಡರಾತ್ರಿ 30 ಕುರಿ, 12 ಮೇಕೆ ಕದ್ದೊಯ್ದ ಕಳ್ಳರು: ಸಂಕಷ್ಟದಲ್ಲಿ ರೈತರು - ಲಿಂಗಸುಗೂರು ಕುರಿ ಕಳ್ಳತನ
ತಡರಾತ್ರಿ ಬೊಲೆರೊ ವಾಹನದಲ್ಲಿ ಬಂದ ಕಳ್ಳರು 30 ಕುರಿ ಹಾಗೂ 12 ಮೇಕೆಗಳನ್ನು ಕದ್ದು ಪರಾರಿಯಾದ ಘಟನೆ ಲಿಂಗಸುಗೂರು ತಾಲೂಕಿನಲ್ಲಿ ನಡೆದಿದೆ.
ಕುರಿ ಕಳ್ಳತನ
ರೈತನಿಗೆ ಆಂದಾಜು 3 ಲಕ್ಷಕ್ಕೂ ಅಧಿಕ ನಷ್ಟವಾಗಿದೆ ಎನ್ನಲಾಗಿದೆ. ಈಚನಾಳ ಗ್ರಾಮದ ಅಮರಪ್ಪ ಎನ್ನುವವರ 12 ಮೇಕೆಗಳನ್ನೂ ಸಹ ಕಳ್ಳತನ ಮಾಡಲಾಗಿದೆ. ಈ ಕುರಿತು ರೈತರಿಬ್ಬರು ಪೊಲೀಸರಿಗೆ ದೂರು ನೀಡುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ:ದೊಡ್ಡಬಳ್ಳಾಪುರ: ತಡರಾತ್ರಿ ಕೊಟ್ಟಿಗೆಗೆ ನುಗ್ಗಿ 11 ಕುರಿಗಳನ್ನು ಕದ್ದೊಯ್ದ ಖದೀಮರು