ರಾಯಚೂರು: ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷನ ಮನೆಗೆ ಖದೀಮರು ಕನ್ನ ಹಾಕಿರುವ ಘಟನೆ ಜಿಲ್ಲೆಯ ಉಡಮಗಲ್-ಖಾನಾಪುರ ಗ್ರಾಮದಲ್ಲಿ ನಡೆದಿದೆ.
ರಾತ್ರಿ ವೇಳೆ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಶಾಂತಪ್ಪ ಅವರ ಮನೆಯ ಬೀಗ ಮುರಿದು ಒಳಗೆ ನುಗ್ಗಿದ ಕಳ್ಳರು, ತಿಜೋರಿಯಲ್ಲಿದ್ದ ಸುಮಾರು 5 ತೊಲೆ ಬಂಗಾರ ಹಾಗೂ 85 ಸಾವಿರ ರೂಪಾಯಿ ನಗದನ್ನು ದೋಚಿ ಪರಾರಿಯಾಗಿದ್ದಾರೆ.