ರಾಯಚೂರು: ಮಂತ್ರಾಲಯ ಶ್ರೀರಾಘವೇಂದ್ರಸ್ವಾಮಿಗಳ 352ನೇ ಆರಾಧನೆ ಮಹೋತ್ಸವಕ್ಕೆ ಶ್ರೀಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಮಂಗಳವಾರ ಚಾಲನೆ ನೀಡಿದರು. ಶ್ರೀಮಠದ ಮುಂಭಾಗದಲ್ಲಿ ಗೋ ಪೂಜೆ, ಧಾನ್ಯ ಪೂಜೆ, ಆಶ್ವ, ಒಂಟೆ ಪೂಜೆ ಹಾಗೂ ಧ್ವಜಾರೋಹಣ ನೆರವೇರಿಸಿ ಏಳು ದಿನಗಳ ಸಪ್ತ ಮಹೋತ್ಸವಕ್ಕೆ ಅದ್ಧೂರಿಯಾಗಿ ಚಾಲನೆ ನೀಡಲಾಯಿತು. ಬೆಳಗ್ಗೆ ರಾಯರ ಮೂಲ ಬೃಂದಾವನಕ್ಕೆ ಅಭಿಷೇಕ ಹಾಗೂ ವಿಶೇಷ ಪೂಜೆ ಕೈಂಕರ್ಯಗಳು ಜರುಗಿದವು. ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥರಿಂದ ಮೂಲ ರಾಮದೇವರ ಪೂಜೆ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಶ್ರೀಮಠದ ವ್ಯವಸ್ಥಾಪಕರಾದ ಎಸ್ ಕೆ ಶ್ರೀನಿವಾಸರಾವ್, ವೆಂಕಟೇಶ ಜೋಷಿ ಹಾಗೂ ಐ.ಪಿ ನರಸಿಂಹಾಚಾರ್ಯ, ಅಧಿಕಾರಿಗಳು, ಸಿಬ್ಬಂದಿಗಳು, ಭಕ್ತರು ಇದ್ದರು.
ಮಂತ್ರಾಲಯ ಶ್ರೀರಾಘವೇಂದ್ರಸ್ವಾಮಿಗಳ 352ನೇ ಆರಾಧನಾ ಮಹೋತ್ಸವಕ್ಕೆ ಚಾಲನೆ - ಶ್ರೀರಾಘವೇಂದ್ರಸ್ವಾಮಿಗಳ ಆರಾಧನ ಮಹೋತ್ಸವಕ್ಕೆ ಚಾಲನೆ
ಶ್ರೀರಾಘವೇಂದ್ರಸ್ವಾಮಿಗಳ 352ನೇ ಆರಾಧನ ಮಹೋತ್ಸವಕ್ಕೆ ಶ್ರೀ ಸುಬುಧೇಂದ್ರ ತೀರ್ಥರು ಚಾಲನೆ ನೀಡಿದರು.
Published : Aug 29, 2023, 9:09 PM IST
|Updated : Aug 30, 2023, 10:11 AM IST
ಆರಾಧನಾ ಮಹೋತ್ಸವ ಹಿನ್ನೆಲೆ ಶ್ರೀಮಠಕ್ಕೆ ಬಗೆ ಬಗೆಯ ಹೂಗಳು ಮತ್ತು ವಿದ್ಯುತ್ ದೀಪಾಂಲಕಾರ ಮಾಡಲಾಗಿದೆ. ಈಗಾಗಲೇ ಆರಾಧನೆಗೆಂದು ರಾಜ್ಯ ಸೇರಿದಂತೆ ಹೊರರಾಜ್ಯಗಳಿಂದಲೂ ಭಕ್ತರು ಆಗಮಿಸುತ್ತಿದ್ದಾರೆ. ಧ್ವಜಾರೋಹಣ ನೇರವೇರಿಸಿದ ನಂತರ ಮಾತನಾಡಿ ಶ್ರೀಗಳು, ಗೋ ಪೂಜೆ, ಅಶ್ವ ಪೂಜೆ, ವಾಹನಗಳ, ದೀಪ ಪ್ರಜ್ವಲನೆ ಸೇರಿದಂತೆ ಮೊದಲು ಧಾರ್ಮಿಕ ಪೂಜೆಗಳನ್ನು ನೇರವೇರಸಲಾಗಿದೆ. ಇಂದಿನಿಂದ ಏಳು ದಿನಗಳ ಕಾಲ ರಾಯರ ಆರಾಧನಾ ಮಹೋತ್ಸವ ನಡೆಯಲಿದೆ. ದೇಶದ ನಾನಾ ಕಡೆಗಳಿಂದ ಭಕ್ತರು ಆಗಮಿಸಲಿದ್ದಾರೆ. ಜಾತ್ಯತೀತವಾಗಿ ಭಕ್ತರು ಆಗಮಿಸುತ್ತಾರೆ. ಆರಾಧನೆ ಆರಂಭಕ್ಕೆ ಬರುವ ಭಕ್ತರಿಗಾಗಿ ವಸತಿ, ಸ್ನಾನ ಗೃಹ, ಆರೋಗ್ಯ ಸೇರಿದಂತೆ ಸಕಲ ವ್ಯವಸ್ಥೆ ಕೈಗೊಳ್ಳಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಈ ಮಹೋತ್ಸವಕ್ಕೆ ಆಗಮಿಸುವಂತೆ ಆಹ್ವಾನಿಸಿದರು. ಅಲ್ಲದೇ ನದಿಯಲ್ಲಿ ನೀರಿನ ಕೊರತೆಯಿದ್ದು ಜಲಾಶಯದಿಂದ ಅಲ್ಪ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ಉಭಯ ರಾಜ್ಯ ಸರ್ಕಾರಗಳೊಂದಿಗೆ ಸಂಪರ್ಕ ಮಾಡಲಾಗುತ್ತಿದೆ ಎಂದು ತಿಳಿಸಿದರು.