ಕರ್ನಾಟಕ

karnataka

ETV Bharat / state

ರಾಯಚೂರಲ್ಲಿ ಅನಾರೋಗ್ಯದಿಂದ ಅಣ್ಣ ಮೃತ; ಸಹೋದರನ ಸಾವಿನ ಸುದ್ದಿ ಬೆನ್ನಲ್ಲೇ ತಂಗಿ ನಿಧನ - Narasappa Heera (65) no more

ಹುಣಸಿಹಾಳಹುಡಾ ಗ್ರಾಮದ ನರಸಪ್ಪ ಹೀರಾ (65) ಇವರು ಅನಾರೋಗ್ಯ ಹಿನ್ನೆಲೆ ಸೋಮವಾರ ರಾತ್ರಿ ರಾಯಚೂರು ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಸುದ್ದಿ ಕೇಳಿ ಅವರ ತಂಗಿ ಸಿದ್ದಮ್ಮ (50) ಬಿಪಿ ಕಡಿಮೆಯಾಗಿ ಮೃತಪಟ್ಟಿದ್ದಾರೆ.

Narasappa heera- siddamma
ನರಸಪ್ಪ ಹೀರಾ - ಸಿದ್ದಮ್ಮ

By

Published : Sep 22, 2021, 4:23 PM IST

ರಾಯಚೂರು: ಸಹೋದರನ ಸಾವಿನ ಸುದ್ದಿ ತಿಳಿದು‌ ಸಹೋದರಿಯೂ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ಜಿಲ್ಲೆಯ ಹುಣಸಿಹಾಳಹುಡಾ ಗ್ರಾಮದಲ್ಲಿ ನಡೆದಿದೆ.

ಹುಣಸಿಹಾಳಹುಡಾ ಗ್ರಾಮದ ನರಸಪ್ಪ ಹೀರಾ (65) ಅನಾರೋಗ್ಯ ಹಿನ್ನೆಲೆ ಸೋಮವಾರ ರಾತ್ರಿ ರಾಯಚೂರು ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಸುದ್ದಿ ಕೇಳಿ ಅವರ ಸಹೋದರಿ ಸಿದ್ದಮ್ಮ (50) ಬಿಪಿ ಕಡಿಮೆ(Low BP)ಯಾಗಿ ಮೃತಪಟ್ಟಿದ್ದಾರೆ.

ಸಹೋದರನ ಆರೋಗ್ಯದಲ್ಲಿ ತೊಂದರೆ ಕಾಣಿಸಿಕೊಂಡಿದ್ದರಿಂದ ಸಿರವಾರ ಪಟ್ಟಣದಿಂದ ಸಹೋದರಿ ಅಣ್ಣನ ಮನೆಗೆ ಬಂದಿದ್ದರು ಎಂಬುದಾಗಿ ತಿಳಿದುಬಂದಿದೆ. ಒಂದೇ ದಿನದಲ್ಲಿ ಸಹೋದರ ಮತ್ತು ಸಹೋದರಿ ಇಹಲೋಕ ತ್ಯಜಿಸಿರುವು ಘಟನೆ ಎಲ್ಲರ ಮನಕಲಕುವಂತೆ ಮಾಡಿದೆ.

ಓದಿ:ವಿದ್ಯಾರ್ಥಿಗಳಿಗೆ ಕೋವಿಡ್​ ತಗುಲಿದ್ದರೂ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಭೆ-ಸಮಾರಂಭ!

ABOUT THE AUTHOR

...view details