ರಾಯಚೂರು: ನಗರದ ಜಿಲ್ಲಾ ಪೊಲೀಸ್ ಕವಾಯತ್ ಮೈದಾನದಲ್ಲಿ ಸೈಲೆನ್ಸರ್‌ಗಳನ್ನು ರಸ್ತೆಯ ಮೇಲಿರಿಸಿದ ಪೊಲೀಸರು ಅವುಗಳನ್ನು ರೋಡ್ ರೂಲರ್‌ನಿಂದ ನಾಶಪಡಿಸಿದರು. ಜೂನ್ 2 ರಿಂದ 8 ನೇ ತಾರೀಖಿನವರೆಗೂ ವಿಶೇಷ ಕಾರ್ಯಾಚರಣೆ ಹಮ್ಮಿಕೊಂಡಿದ್ದ ಇಲಾಖೆ ಜಿಲ್ಲೆಯಲ್ಲಿ ಶಬ್ದಮಾಲಿನ್ಯ ಮಾಡುತ್ತಿದ್ದ ದ್ವಿಚಕ್ರ, ತ್ರಿಚಕ್ರ ಮತ್ತು ಭಾರಿ ವಾಹನಗಳ ಸೈಲೆನ್ಸರ್‌ಗಳನ್ನು ವಶಕ್ಕೆ ಪಡೆದಿದ್ದರು. ಇದರ ಜೊತೆಗೆ 2.95 ಲಕ್ಷ ರೂಪಾಯಿ ದಂಡ ವಿಧಿಸಿದ್ದಾರೆ.
ರೋಡ್ ರೋಲರ್ ಹರಿಸಿ ವಾಹನಗಳ ಸೈಲೆನ್ಸರ್ ನಾಶಪಡಿಸಿದ ರಾಯಚೂರು ಪೊಲೀಸರು - ರಾಯಚೂರಿನಲ್ಲಿ ಬೈಕ್ಗಳ ಸೈಲೆನ್ಸರ್ ನಾಶ
ಶಬ್ದಮಾಲಿನ್ಯ ಉಂಟುಮಾಡುತ್ತಿದ್ದ ವಾಹನಗಳ ಸೈಲೆನ್ಸರ್‌ಗಳನ್ನು ರಾಯಚೂರು ಜಿಲ್ಲಾ ಪೊಲೀಸರು ವಶಪಡಿಸಿ ರೋಡ್ ರೂರಲ್ ಮೂಲಕ ನಾಶಪಡಿಸಿದರು.
ಶಬ್ದಮಾಲಿನ್ಯ ಮಾಡುತ್ತಿದ್ದ ವಾಹನಗಳ ಸೈಲೆನ್ಸರ್ ವಶಕ್ಕೆ ಪಡೆದು ನಾಶ ಮಾಡಿದ ಪೊಲಿಸ್ ಇಲಾಖೆ