ಕರ್ನಾಟಕ

karnataka

ETV Bharat / state

ಮುಂಬಡ್ತಿಗಾಗಿ ಪ್ರಾ.ಶಾಲಾ ಶಿಕ್ಷಕರ ಪ್ರತಿಭಟನೆ

ಮುಂಬಡ್ತಿ ನೀಡಬೇಕೆಂದು ಆಗ್ರಹಿಸಿ ಪ್ರಾಥಮಿಕ ಶಾಲಾ ಶಿಕ್ಷಕರು ಪ್ರತಿಭಟನೆ ನಡೆಸುತ್ತಿದ್ದಾರೆ.

ಮುಂಬಡ್ತಿಗಾಗಿ ಪ್ರಾ.ಶಾಲಾ ಶಿಕ್ಷಕರ ಪ್ರತಿಭಟನೆ

By

Published : Jun 2, 2019, 10:43 AM IST

ರಾಯಚೂರು :ಕರ್ನಾಟಕ ರಾಜ್ಯ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ವಿದ್ಯಾರ್ಹತೆ ಹಾಗೂ ಸೇವಾ ಆಧಾರದ ಮೇಲೆ 6 ರಿಂದ 8ನೇ ತರಗತಿಗೆ ಬೋಧಿಸಲು ಮುಂಬಡ್ತಿ ಪದನಾಮ ಮಾಡಬೇಕೆಂದು ಒತ್ತಾಯಿಸಿ ಲಿಂಗಸುಗೂರು ಬಿ.ಇ.ಒ ತಾಲೂಕು ಕ್ಷೇತ್ರ ಕಚೇರಿಯ ಮುಂದೆ ಶಿಕ್ಷಕರು ಪ್ರತಿಭಟನೆ ನಡೆಸಿದರು.

ಮುಂಬಡ್ತಿಗಾಗಿ ಪ್ರಾ.ಶಾಲಾ ಶಿಕ್ಷಕರ ಪ್ರತಿಭಟನೆ

1ರಿಂದ 7 ನೇ ತರಗತಿಗೆ ನೇಮಕರಾದ ಪದವೀಧರ ಶಿಕ್ಷಕರು 2005 ರಿಂದ 8ನೇ ತರಗತಿ ಪ್ರಾರಂಭವಾದಾಗ 6 ರಿಂದ 8ನೇ ತರಗತಿಗಳಿಗೆ ಬೋಧಿಸುತ್ತಾ ಬಂದಿದ್ದಾರೆ. ಎಮ್.ಎ, ಎಮ್ ಎಸ್ಸಿ, ಬಿ.ಎಡ್. ಪಿ.ಹೆಚ್​​.ಡಿ, ಪಡೆದ ಅನುಭವಸ್ಥರು 14 ವರ್ಷಗಳಿಂದ ಬೊಧಿಸುತ್ತಿದ್ದರೂ ಮುಂಬಡ್ತಿ ನೀಡಿಲ್ಲ. 6-8 ಹುದ್ದೆಗಳನ್ನು 2 ಬಾರಿ ನೇಮಕ ಮಾಡಿ 3ನೇ ಬಾರಿ ನೇಮಕ ನಡೆಯುತ್ತಿದ್ದರೂ ಇನ್ನೂ ಮುಂಬಡ್ತಿ ನೀಡಿಲ್ಲ ಎಂದು ದೂರಿದರು.

ಕಳೆದ ವರ್ಷ ಬೆಂಗಳೂರಿನಲ್ಲಿ ಧರಣಿ‌ ಸತ್ಯಾಗ್ರಹ ನಡೆಸಿದರೂ ಪ್ರಯೋಜನವಾಗಿಲ್ಲ. ಹೀಗೆ ಅನ್ಯಾಯ ಮುಂದುವರೆದರೆ 1-7 -2019 ರಿಂದ 6ರಿಂದ 8 ನೇ ತರಗತಿಗೆ ಬೋಧನೆ ಬಹಿಷ್ಕರಿಸುತ್ತೇವೆಂದು ಎಚ್ಚರಿಸಿದರು.

ABOUT THE AUTHOR

...view details