ಕರ್ನಾಟಕ

karnataka

ETV Bharat / state

ಫಲ ನೀಡದ ಕ್ರಮ... ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಯಚೂರಿಗೆ ಮತ್ತೆ ಕೊನೆ ಸ್ಥಾನ - result

ಈ ಬಾರಿ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಯಚೂರು ಜಿಲ್ಲೆ ಶೈಕ್ಷಣಿಕವಾಗಿ ಕಳಪೆ ಸಾಧನೆ ಮಾಡಿದೆ. ಈ ಬಗ್ಗೆ ಕಾರಣ ಕೊಟ್ಟ ಅಧಿಕಾರಿಗಳು ಸುಧಾರಣಾ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೈಕ್ಷಣಿಕವಾಗಿ ಕಳಪೆ ಸಾಧನೆ ಮಾಡಿದ ಜಿಲ್ಲೆ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿಡಿಪಿಐ ಬಿ ಕೆ ನಂದನೂರು

By

Published : May 1, 2019, 2:28 PM IST

ರಾಯಚೂರು: ಪ್ರಸಕ್ತ ವರ್ಷದ ಎಸ್ಸೆಸ್ಸೆಲ್ಸಿ ಫಲಿತಾಂಶ ನಿನ್ನೆ ಹೊರಬಂದಿದ್ದು ಜಿಲ್ಲೆಯು ಕೊನೆಯ 33ನೇ ಸ್ಥಾನ ಗಳಿಸುವ ಮೂಲಕ ಮತ್ತೆ ಕಳಪೆ ಸಾಧನೆ ಮಾಡಿದೆ.

ಕಳೆದ ಸಾಲಿನಲ್ಲಿ ಜಿಲ್ಲೆ ಶೇ. 68 ಪಡೆದು 29ನೇ ಸ್ಥಾನ ಪಡೆದಿತ್ತು. ಆದರೆ, ಈ ಬಾರಿ ಹಲವು ಯೋಜನೆಗಳನ್ನು ರೂಪಿಸಿದರೂ ಕಳೆದ ಬಾರಿಗಿಂತ ಶೇ.3 ಸ್ಥಾನ ಕಡಿಮೆ ಪಡೆದುಕೊಂಡಿದೆ. ರಾಯಚೂರು ನಗರ, ಸಿಂಧನೂರು, ಮಾನ್ವಿ, ದೇವದುರ್ಗ, ಲಿಂಗಸುಗೂರು ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 27,765 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ 16,214 ವಿದ್ಯಾರ್ಥಿಗಳು ಪಾಸ್​ ಆದರೆ 11,551 ವಿದ್ಯಾರ್ಥಿಗಳು ಫೇಲ್​ ಆಗಿದ್ದಾರೆ. ಒಟ್ಟಾರೆ ಈ ಸಾಲಿನ ಫಲಿತಾಂಶ ನೋಡಿದರೆ ಖಾಸಗಿ ಶಾಲೆಗಿಂತ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳೇ ಮೇಲುಗೈ ಸಾಧಿಸಿದ್ದಾರೆ ಎಂದು ಅಂಕಿ ಅಂಶಗಳಿಂದ ತಿಳಿದುಬಂದಿದೆ.

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೈಕ್ಷಣಿಕವಾಗಿ ಕಳಪೆ ಸಾಧನೆ ಮಾಡಿದ ಜಿಲ್ಲೆ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿಡಿಪಿಐ ಬಿ ಕೆ ನಂದನೂರು

ಇನ್ನು ಫಲಿತಾಂಶ ಕುರಿತು ಮಾತನಾಡಿದ ಡಿಡಿಪಿಐ ಬಿ.ಕೆ.ನಂದನೂರು, ಜಿಲ್ಲೆಯಲ್ಲಿ ವಿಷಯವಾರು ಶಿಕ್ಷಕರ ಕೊರತೆ ಇದೆ. ಹಾಗಾಗಿ ಈ ಸಾಲಿನ ಫಲಿತಾಂಶ ಕುಸಿದಿದೆ. ಮುಖ್ಯವಾಗಿ ಗಣಿತ, ವಿಜ್ಞಾನ, ಇಂಗ್ಲಿಷ್ ವಿಷಯದ ಶಿಕ್ಷಕರ ಹುದ್ದೆಗಳು ಖಾಲಿಯಿವೆ. ಈಗ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗಾಗಿ ಪರಿಹಾರ ಬೋಧನಾ ಯೋಜನೆ ಹಮ್ಮಿಳ್ಳಲಾಗಿದೆ ಎಂದರು.

ABOUT THE AUTHOR

...view details