ಕರ್ನಾಟಕ

karnataka

ETV Bharat / state

ತುಂಗಭದ್ರಾ ಜಲಾಶಯದಿಂದ ನೀರು ಬಿಡುಗಡೆ: ರಾಘವೇಂದ್ರ ಸ್ವಾಮಿ ಜಪದಕಟ್ಟೆ ಜಲಾವೃತ - ತುಂಗಭದ್ರಾ ಜಲಾಶಯದಿಂದ ನೀರು ಬಿಡುಗಡೆ

ತುಂಗಭದ್ರಾ ಜಲಾಶಯದಿಂದ ಲಕ್ಷಾಂತರ ಕ್ಯೂಸೆಕ್​​ ನೀರನ್ನು ನದಿಗೆ ಹರಿಸಿದ ಪರಿಣಾಮ ಶ್ರೀರಾಘವೇಂದ್ರ ಸ್ವಾಮಿ ಜಪದಕಟ್ಟೆ ಜಲಾವೃತಗೊಂಡಿದೆ.

Place of Shri Raghavendra Swamy  penance Drowned
ಶ್ರೀ ರಾಘವೇಂದ್ರ ಸ್ವಾಮಿ ಜಪದಕಟ್ಟೆ ಜಲಾವೃತ್ತ

By

Published : Jul 15, 2022, 10:57 AM IST

ರಾಯಚೂರು:ತಾಲೂಕಿನ ಬಿಚ್ಚಾಲಿ ಗ್ರಾಮದ ತುಂಗಭದ್ರಾ ನದಿತೀರದಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳು ತಪಸ್ಸು ಮಾಡಿರುವ ಜಪದ ಕಟ್ಟೆಯ ಸುತ್ತಲೂ ನೀರು ಅವರಿಸಿಕೊಂಡಿದೆ. ವಿಜಯನಗರ(ಹೊಸಪೇಟೆ) ತುಂಗಭದ್ರಾ ಜಲಾಶಯದಿಂದ ನದಿಗೆ ಲಕ್ಷಕ್ಕೂ ಅಧಿಕ ಕ್ಯೂಸೆಕ್​​ ನೀರು ಹರಿಸಲಾಗಿದೆ. ಇದರಿಂದಾಗಿ ಸಿಂಧನೂರು, ಮಾನವಿ, ರಾಯಚೂರು ತಾಲೂಕಿನ ನದಿ ತೀರದ ಗ್ರಾಮಗಳಿಗೆ ಪ್ರವಾಹ ಭೀತಿ ಎದುರಾಗಿದೆ.

ನದಿಪಾತ್ರದಲ್ಲಿರುವ ರೈತರ ಜಮೀನುಗಳಿಗೆ ನೀರು ನುಗ್ಗಿ ಬೆಳೆ ನಷ್ಟವಾಗುವ ಆತಂಕ ಎದುರಾಗಿದೆ. ಜಿಲ್ಲಾಡಳಿತದಿಂದ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದು, ಜನ-ಜಾನುವಾರು ನದಿಯ ತೀರಕ್ಕೆ ತೆರಳದಂತೆ ಗ್ರಾಮಗಳಲ್ಲಿ ಸಂದೇಶ ಸಾರಲಾಗಿದೆ.


ಜಿಲ್ಲೆಯ ಬಲ ಭಾಗದಲ್ಲಿರುವ ಕೃಷ್ಣಾ ಹಾಗೂ ಎಡಭಾಗದಲ್ಲಿರುವ ತುಂಗಭದ್ರಾ ನದಿಯಲ್ಲಿ ಲಕ್ಷಾಂತರ ಕ್ಯೂಸೆಕ್​​ ನೀರು ಹರಿಯುತ್ತಿರುವುದ್ದರಿಂದ ಜಿಲ್ಲೆಯಲ್ಲೀಗ ಪ್ರವಾಹದ ಆತಂಕವಿದೆ.

ಇದನ್ನೂ ಓದಿ:ಅಮರನಾಥ ಯಾತ್ರೆ: ನೈಸರ್ಗಿಕ ವಿಕೋಪದಿಂದ 8 ಸಾವು, ಮೃತರ ಸಂಖ್ಯೆ 41ಕ್ಕೆ ಏರಿಕೆ

ABOUT THE AUTHOR

...view details