ರಾಯಚೂರು :ಇಡೀ ವಿಶ್ವವೇ ಕೊರೊನಾ ಭೀತಿಯಿಂದ ಮುಖಗವಸು, ಸ್ಯಾನಿಟೈಸರ್ಗಳನ್ನು ಬಳಸುತ್ತಿದೆ. ಆದರೆ, ವಾರ್ಡ್ಗಳ ಚರಂಡಿ, ರಸ್ತೆಗಳನ್ನು ಸ್ವಚ್ಛಗೊಳಿಸುತ್ತಿರುವ ಪೌರ ಕಾರ್ಮಿಕರಿಗೆ ಮಾತ್ರ ಮೂಲಸೌಲಭ್ಯಗಳನ್ನು ಕಲ್ಪಿಸದಿರುವುದು ಪುರಸಭೆಯ ದಿವ್ಯ ನಿರ್ಲಕ್ಷ್ಯ ಎತ್ತಿ ತೋರಿಸುತ್ತಿದೆ.
ಪುರಸಭೆ ದಿವ್ಯ ನಿರ್ಲಕ್ಷ್ಯ.. ಪೌರ ಕಾರ್ಮಿಕರಿಗಿಲ್ಲ ಸುರಕ್ಷತೆಯ ಕವಚ.. ಲಿಂಗಸುಗೂರು ತಾಲೂಕಿನ ಪುರಸಭೆಯ ಆಡಳಿತ ವ್ಯವಸ್ಥೆ ನಿರ್ಲಕ್ಷ್ಯದಿಂದ ಪೌರ ಕಾರ್ಮಿಕರು ಸಂಕಷ್ದದ ಬದುಕು ಎದುರಿಸುತ್ತಿದ್ದಾರೆ. ಇಲ್ಲಿನ ಕರಡಕಲ್ಲ, ಕಸಬಾ ಲಿಂಗಸುಗೂರ ಒಳಗೊಂಡು 23 ವಾರ್ಡ್ಗಳ ಸ್ವಚ್ಛತೆಗೆ ಮುಂದಾದ ಪೌರ ಕಾರ್ಮಿಕರ ಶೋಚನೀಯ ಸ್ಥಿತಿ ಇದು.
ಇಲ್ಲಿ ಸಂಗ್ರಹಿಸಲಾದ ಕಸವನ್ನು ವಾಹನಗಳ ಮೂಲಕ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಕಳುಹಿಸುವ ಕಾರ್ಮಿಕರಿಗೆ ಅಗತ್ಯ ಆರೋಗ್ಯಕರ ಕವಚಗಳನ್ನು ನೀಡಿಲ್ಲ. ಕಚೇರಿಯಲ್ಲಿ ಕೆಲಸ ನಿರ್ವಹಿಸುವ ಎಲ್ಲ ನೌಕರರು, ಸಿಬ್ಬಂದಿ ಮುಖಕ್ಕೆ ಮುಖಗವಸು ಧರಿಸಿ, ಕೈತೊಳೆದುಕೊಂಡು ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ, ಚರಂಡಿ ತ್ಯಾಜ್ಯವನ್ನು ಎತ್ತಿ ಹಾಕುವ ಜೀವಗಳಿಗೆ ಬೆಲೆ ಇಲ್ಲದಂತಾಗಿರುವುದು ಪುರಸಭೆಯ ಅಧಿಕಾರಿಗಳ ರಾಕ್ಷಸ ಗುಣವನ್ನು ಎತ್ತಿ ತೋರಿಸುತ್ತದೆ.
ಕೂಡಲೇ ಅಗತ್ಯ ಪರಿಕರ ಹಾಗೂ ಆರೋಗ್ಯ ರಕ್ಷಕ ಮುಖಗವಸುಗಳನ್ನು ವಿತರಿಸಬೇಕು ಎಂದು ಕೆಲ ಸಂಘಟನೆಗಳು ಆಗ್ರಹಿಸುತ್ತಿವೆ.