ಕರ್ನಾಟಕ

karnataka

By

Published : Jul 15, 2020, 11:53 AM IST

ETV Bharat / state

ಆರೋಗ್ಯ ಇಲಾಖೆಯ ಹಲವು ಹುದ್ದೆಗಳು ಖಾಲಿ: ಹಳ್ಳಿಗಳಲ್ಲಿ ಕೆಲಸ ಮಾಡಲು ವೈದ್ಯರ ಹಿಂದೇಟು

ಜಿಲ್ಲೆಯ ನಾನಾ ತಾಲೂಕು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ 52 ಹುದ್ದೆಗಳು ಮುಂಜೂರಾಗಿವೆ. ಆದರೆ, ಪ್ರಸ್ತುತ 28 ತಜ್ಞ ವೈದ್ಯರು ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದು, ಇನ್ನುಳಿದ 24 ಹುದ್ದೆಗಳು ಖಾಲಿ ಇವೆ. ಪರಿಣಾಮ ಗ್ರಾಮೀಣ ಪ್ರದೇಶದಲ್ಲಿನ ಜನರು ತಜ್ಞ ವೈದ್ಯರ ಸೇವೆಯಿಂದ ವಂಚಿತರಾಗಿದ್ದಾರೆ.

ಆರೋಗ್ಯ ಇಲಾಖೆ ಹಲವು ಹುದ್ದೆಗಳು ಖಾಲಿ
ಆರೋಗ್ಯ ಇಲಾಖೆ ಹಲವು ಹುದ್ದೆಗಳು ಖಾಲಿ

ರಾಯಚೂರು: ದಿನದಿಂದ ದಿನಕ್ಕೆ ಹರಡುತ್ತಿರುವ ಕೊರೊನಾ ಸೋಂಕು ನಿಯಂತ್ರಿಸಲು ಆರೋಗ್ಯ ಇಲಾಖೆಯಿಂದ ಶ್ರಮವಹಿಸಿ ಕಾರ್ಯ ನಿರ್ವಹಿಸುತ್ತಿದೆ. ಆದರೆ, ಜಿಲ್ಲೆಯ ಜಿಲ್ಲಾ ಆರೋಗ್ಯ ಇಲಾಖೆಯಲ್ಲಿ ತಜ್ಞ ವೈದ್ಯರು, ವೈದ್ಯರು, ಸಹಾಯಕ ವೈದ್ಯರ ಕೊರತೆ ನಡುವೆಯ ಕೊರೊನಾ ವಿರುದ್ಧ ವೈದ್ಯರು ಹೊರಾಡುತ್ತಿದ್ದಾರೆ.

ಜಿಲ್ಲೆಯ ಆರೋಗ್ಯ ಇಲಾಖೆಯಲ್ಲಿ ತಜ್ಞ ವೈದ್ಯರು ಸೇರಿದಂತೆ ಹಲವು ಹುದ್ದೆಗಳು ಖಾಲಿ ಇವೆ. ಇಂತಹ ಸಂದರ್ಭದಲ್ಲೂ ಸಿಬ್ಬಂದಿ ಕೊರೊನಾ ವಿರುದ್ಧ ಹೋರಾಟದಲ್ಲಿ ಸಕ್ರಿಯವಾಗಿದೆ. ತಾಲೂಕು, ಹಾಗೂ ಗ್ರಾಮೀಣ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ತಜ್ಞ ವೈದ್ಯರ ಕೊರತೆಯಿದೆ. ಇದನ್ನ ನೀಗಿಸಲು ಇಲಾಖೆಯಿಂದ ಸಾಕಷ್ಟು ಬಾರಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದರೂ ತಜ್ಞ ವೈದ್ಯರು ಮಾತ್ರ ಸರ್ಕಾರಿ ಆಸ್ಪತ್ರೆಗಳಲ್ಲಿ ಕಾರ್ಯ ನಿರ್ವಹಿಸಲು ಮುಂದಾಗುತ್ತಿಲ್ಲ.

ಜಿಲ್ಲೆಯಲ್ಲಿರುವ ನಾನಾ ತಾಲೂಕು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ 52 ಹುದ್ದೆಗಳು ಮುಂಜುರಾಗಿವೆ. ಆದರೆ, ಪ್ರಸ್ತುತ 28 ತಜ್ಞ ವೈದ್ಯರು ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದು, ಇನ್ನುಳಿದ 24 ಹುದ್ದೆಗಳು ಖಾಲಿಯಿವೆ. ಪರಿಣಾಮ ಗ್ರಾಮೀಣ ಪ್ರದೇಶದಲ್ಲಿನ ಜನರು ತಜ್ಞ ವೈದ್ಯರ ಸೇವೆಯಿಂದ ವಂಚಿತರಾಗಿದ್ದಾರೆ.

ಆರೋಗ್ಯ ಇಲಾಖೆ ಹಲವು ಹುದ್ದೆಗಳು ಖಾಲಿ

ತಾಲೂಕು ಆಸ್ಪತ್ರೆಗಳಲ್ಲಿ 4 ವೈದ್ಯಾಧಿಕಾರಿಗಳ ಹುದ್ದೆ ಮಂಜೂರಾಗಿದ್ದು, 2 ಹುದ್ದೆಗಳು ಖಾಲಿಯಿವೆ. 6 ಹಿರಿಯ ವೈದ್ಯಾಧಿಕಾರಿಗಳ ಹುದ್ದೆಗಳಲ್ಲಿ 4 ಹುದ್ದೆಗಳು ಖಾಲಿ ಇವೆ. ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ಎಂಬಿಬಿಎಸ್ ವೈದ್ಯಾಧಿಕಾರಿಗಳ ತಲಾ ಮೂರು ಹುದ್ದೆಗಳು ಖಾಲಿಯಿವೆ. ಗ್ರೂಪ್ ಬಿ ನಲ್ಲಿ ಮಂಜೂರಾಗಿರುವ 5 ಸಹಾಯಕ ಆಡಳಿತಾಧಿಕಾರಿಗಳ ಹುದ್ದೆಗಳು ಖಾಲಿಯಿವೆ. ಜಿಲ್ಲಾ ನರ್ಸಿಂಗ್ ಅಧಿಕಾರಿ, ಸಹಾಯಕ ಕುಷ್ಟರೋಗ ಅಧಿಕಾರಿ, ಸಹಾಯಕ ಎಂಟಮಾಲಜಿಸ್ಟ್, ಮೈಕ್ರೋ ಬಯಾಲಜಿಸ್ಟ್, ಆರೋಗ್ಯ ಮೇಲ್ವಿಚಾರಕರ ಹುದ್ದೆಗಳು ಸಹ ಖಾಲಿಯಾಗಿವೆ.

ಪುರುಷ ಹಿರಿಯ ಆರೋಗ್ಯ ಸಹಾಯಕರ 46 ಹುದ್ದೆಗಳು ಮಂಜೂರಾಗಿದ್ದರೆ, 27 ಹುದ್ದೆಗಳು ಖಾಲಿಯಿವೆ. ಮಹಿಳಾ ಹಿರಿಯ ಆರೋಗ್ಯ ಸಹಾಯಕರ 37 ಹುದ್ದೆಗಳಲ್ಲಿ 22 ಹುದ್ದೆಗಳು ಖಾಲಿಯಿವೆ. ಕಿರಿಯ ಆರೋಗ್ಯ ಸಹಾಯಕರ 224 ಮಂಜೂರಾದ ಹುದ್ದೆಗಳಲ್ಲಿ 46 ಹುದ್ದೆಗಳು ಖಾಲಿ ಇವೆ. 142 ಶುಶ್ರೂಷಕಿಯರ ಹುದ್ದೆಗಳಲ್ಲಿ 46 ಹುದ್ದೆಗಳು ಖಾಲಿಯಿದ್ದು, 60 ಕಿರಿಯ ಪ್ರಯೋಗ ಶಾಲಾ ತಂತ್ರಜ್ಞರ ಹುದ್ದೆಗಳಲ್ಲಿ 27 ಹುದ್ದೆಗಳು ಖಾಲಿಯಿವೆ. 61 ಪ್ರಥಮ ದರ್ಜೆ ಸಹಾಯಕ ಹುದ್ದೆಗಳಲ್ಲಿ 41, ದ್ವಿತೀಯ ದರ್ಜೆ ಸಹಾಯಕರ 29 ಹುದ್ದೆಗಳಲ್ಲಿ 9 ಹುದ್ದೆಗಳು, ಕ್ಲರ್ಕ್ ಕಂ ಟೈಪಿಸ್ಟ್ ಮಂಜೂರಾದ 6 ಹುದ್ದೆಗಳು ಖಾಲಿಯಿವೆ. ಮಂಜೂರಾಗಿರುವ ಗ್ರೂಪ್ ಡಿಯ 360 ಹುದ್ದೆಗಳಲ್ಲಿ 102 ಹುದ್ದೆಗಳು ಖಾಲಿಯಿದ್ದು, 50 ವಾಹನ ಚಾಲಕರ ಹುದ್ದೆಗಳಲ್ಲಿ 14 ಹುದ್ದೆಗಳು ಭರ್ತಿಯಾಗದೇ ಖಾಲಿ ಉಳಿದಿವೆ.

ಇನ್ನು ಖಾಲಿಯಾಗಿರುವ ಕೆಲ ಹುದ್ದೆಗಳನ್ನ ಗುತ್ತಿಗೆದಾರ ಮೇಲೆ ಕಾರ್ಯ ನಿರ್ವಹಿಸಲಾಗುತ್ತಿದೆ. ಆದರೂ ಮಂಜೂರಾಗಿರುವ ಹುದ್ದೆಗಳಂತೆ ಭರ್ತಿಯಾಗದೇ ಖಾಲಿ ಇರುವ ಪರಿಣಾಮ ಇರುವ ವೈದ್ಯರು, ಅಧಿಕಾರಿಗಳು, ಸಿಬ್ಬಂದಿಗಳ ಭಾರ ಹೆಚ್ಚಾಗಿ ಕೆಲಸದ ಒತ್ತಡ ಜಾಸ್ತಿಯಾಗಿದೆ. ಇನ್ನಾದರೂ ಸರಕಾರ ಖಾಲಿಯಿರುವ ಹುದ್ದೆಗಳನ್ನ ಭರ್ತಿ ಮಾಡುವ ಮೂಲಕ ಹಿಂದುಳಿದ ಜಿಲ್ಲೆಗೆ ಪರಿಪೂರ್ಣ ವೈದ್ಯಕೀಯ ಸೇವೆ ಒದಗಿಸಲು ಕ್ರಮ ಕೈಗೊಳ್ಳಬೇಕು ಎನ್ನುವುದು ಜಿಲ್ಲೆಯ ಜನತೆ ಒತ್ತಾಸೆಯಾಗಿದೆ.

ABOUT THE AUTHOR

...view details