ರಾಯಚೂರು:ಅವೈಜ್ಞಾನಿಕವಾಗಿ ಕಬ್ಬಿಣದ ಸರಳುಗಳನ್ನು ತುಂಬಿಕೊಂಡು ಹೋಗುತ್ತಿದ್ದ ವೇಳೆ ಟಿಪ್ಪರ್ ಮುಂಭಾಗ ಮೇಲಕ್ಕೆ ಎದ್ದು ನಿಂತು ಜನರಲ್ಲಿ ಅಚ್ಚರಿ ಮೂಡಿಸಿದೆ. ಜಿಲ್ಲೆಯ ಲಿಂಗಸುಗೂರು ಬಸ್ ನಿಲ್ದಾಣದ ಬಳಿ ಈ ಘಟನೆ ಜರುಗಿದೆ.
ನಿಗದಿತ ಭಾರಕ್ಕಿಂತ ಹೆಚ್ಚಿನ ಭಾರದ ಸರಳು ತುಂಬಿ ಹೊರಟಿದ್ದ ಟಿಪ್ಪರ್ ರಸ್ತೆಯಲ್ಲಿನ ಹಂಪ್ಸ್ ಏರಿಸುವಾಗ ನಿಯಂತ್ರಣ ತಪ್ಪಿ ಮುಂದಿನ ಭಾಗವನ್ನು ಮೇಲಕ್ಕೆ ಎತ್ತಿ ನಿಂತಿತ್ತು. ಸ್ವಲ್ಪ ಅಂತರದಲ್ಲಿ ವಿದ್ಯುತ್ ತಂತಿಗಳಿಗೆ ಟಿಪ್ಪರ್ ತಾಗುವುದನ್ನು ತಡೆದು, ಸಂಭವಿಸಲಿದ್ದ ಭಾರಿ ಅನಾಹುತವನ್ನು ತಪ್ಪಿಸಲಾಗಿದೆ.
ಅವೈಜ್ಞಾನಿಕ ಹಂಪ್ಸ್ಗಳು, ನಿಯಂತ್ರಣ ಮೀರಿ ವಸ್ತುಗಳನ್ನು ಲೋಡಿಂಗ್ ಮಾಡಿರುವುದೇ ಇಂತಹ ಅವಘಡಕ್ಕೆ ಕಾರಣವಾಗಿದೆ. ಹಾಗಾಗಿ ವಾಹನ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸ್ಥಳದಲ್ಲಿ ನೆರೆದಿದ್ದ ಜನತೆ ಆಕ್ರೋಶ ವ್ಯಕ್ತಪಡಿಸಿದರು.