ಕರ್ನಾಟಕ

karnataka

ETV Bharat / state

ಮೂಲಭೂತ ಸೌಕರ್ಯ ಮರೀಚಿಕೆ.. ನಾರಾಯಣಪುರ ಆಣೆಕಟ್ಟೆ ಸಂತ್ರಸ್ತರ ಆಕ್ರೋಶ

ಅಗತ್ಯ ಸೌಲಭ್ಯ ಕಲ್ಪಿಸುವಲ್ಲಿ ಸಂಬಂಧಿಸಿದ ಇಲಾಖೆ ವಿಫಲವಾಗಿದೆ ಎಂದು ನವಲಿ ಪುನರ್ವಸತಿ ಗ್ರಾಮದ ಮುಳುಗಡೆ ಸಂತ್ರಸ್ತರು ಆರೋಪಿಸಿದ್ದಾರೆ.

drowning victims Outrage
ಪುನರ್ವಸತಿ ಯೋಜನೆಯಡಿ ಅಗತ್ಯ ಸೌಲಭ್ಯ ಕಲ್ಪಿಸುವಲ್ಲಿ ವಿಫಲ

By

Published : Jan 9, 2021, 12:05 PM IST

ಲಿಂಗಸುಗೂರು:ಪುನರ್ವಸತಿ ಯೋಜನೆಯಡಿ ಸಂತ್ರಸ್ತರಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ಸಂಬಂಧಿಸಿದ ಇಲಾಖೆ ವಿಫಲವಾಗಿದೆ ಎಂಬ ಆರೋಪ ಕೇಳಿ ಬಂದಿವೆ.

ಪುನರ್ವಸತಿ ಯೋಜನೆಯಡಿ ಅಗತ್ಯ ಸೌಲಭ್ಯ ಕಲ್ಪಿಸುವಲ್ಲಿ ವಿಫಲ: ಮುಳುಗಡೆ ಸಂತ್ರಸ್ತರ ಆಕ್ರೋಶ

ಇದಕ್ಕೆ ನವಲಿ ಪುನರ್ವಸತಿ ಗ್ರಾಮ ನಿದರ್ಶನವಾಗಿದೆ. ನಾರಾಯಣಪುರ ಅಣೆಕಟ್ಟೆ ನಿರ್ಮಾಣ ಸಂದರ್ಭದಲ್ಲಿ ಹಿನ್ನೀರಿನಲ್ಲಿ ಮುಳುಗಡೆಯಾದ ರಾಯಚೂರು ಜಿಲ್ಲೆ ಲಿಂಗಸುಗೂರು ತಾಲ್ಲೂಕಿನ ನವಲಿ ಸೇರಿದಂತೆ ಹಲವು ಗ್ರಾಮಗಳು ಪುನರ್ವಸತಿ ಯೋಜನೆಯಡಿ 40 ವರ್ಷಗಳ ಹಿಂದೆ ಸ್ಥಳಾಂತರಗೊಂಡಿವೆ. ಕೃಷ್ಣಾ ಮೇಲ್ದಂಡೆ ಯೋಜನೆಗೆ ಭೂಮಿ, ಮನೆ ಇತರೆ ಆಸ್ತಿ ಕಳೆದುಕೊಂಡ ಸಂತ್ರಸ್ತರಿಗೆ ಎಕರೆಗೆ 1500 ರಿಂದ 2000 ರೂ. ನೀಡಿದ್ದಾರೆ. ಮನೆಗಳಿಗೆ 4000 ರಿಂದ 6000 ರೂ. ನೀಡಿದ್ದಾರೆ.

ಆದರೆ ಪುನರ್ವಸತಿ ಬಡಾವಣೆಗಳಲ್ಲಿ ಶುದ್ಧ ಕುಡಿಯುವ ನೀರು, ರಸ್ತೆ, ಚರಂಡಿ, ವಿದ್ಯುತ್, ಹೆಚ್ಚುವರಿಯಾಗಿ ಹಾಲಿನ ಡೈರಿ, ಸ್ವಾಗತ ಕಮಾನು, ಕೈಗಾರಿಕ ತರಬೇತಿ ನೀಡುವ ಕಟ್ಟಡ, ದೇವಸ್ಥಾನ, ಸಮುದಾಯ ಭವನದ ಕಾಮಗಾರಿಗಳು ಅಪೂರ್ಣ ಸ್ಥಿತಿಯಲ್ಲಿದ್ದು ನೆಲಸಮಗೊಳ್ಳುತ್ತಿವೆ ಎಂದು ಸಂತ್ರಸ್ತರು ದೂರಿದ್ದಾರೆ.

ಆಲಮಟ್ಟಿ ಹಿನ್ನೀರಿನಲ್ಲಿ ಮುಳುಗಡೆಯಾಗಿರುವ ಬಾಗಲಕೋಟೆ, ವಿಜಯಪುರ ಜಿಲ್ಲೆಗಳ ರೈತರಿಗೆ ಭೂ, ಮನೆ ಪರಿಹಾರ ಹಾಗೂ ಪುನರ್ವಸತಿ ಯೋಜನೆಯಡಿ ನೀಡಿರುವ ಸೌಲಭ್ಯದ ಶೇ 10 ರಷ್ಟು ಸೌಲಭ್ಯ ಕೂಡ ನಾರಾಯಣಪುರ ಅಣೆಕಟ್ಟೆ ಹಿನ್ನೀರು ಮುಳುಗಡೆ ಸಂತ್ರಸ್ತರಿಗೆ ಸಿಗದಿರುವುದು ಸಂತ್ರಸ್ತರ ಆಕ್ರೋಶಕ್ಕೆ ಕಾರಣವಾಗಿದೆ.

ಸಂತ್ರಸ್ತ ಯಲ್ಲಪ್ಪ ಬೆಂಡೋಣಿ ಮಾತನಾಡಿ, ನಾವು ಅವಿದ್ಯಾವಂತರು. ಅತಿ ಹೆಚ್ಚು ಹಿಂದುಳಿದ ವರ್ಗಕ್ಕೆ ಸೇರಿದ ಜನಾಂಗದವರು. ಅದರಲ್ಲಿಯೂ ಅಸಂಘಟಿತರಾಗಿದ್ದರಿಂದ ಸರ್ಕಾರ ಮಲತಾಯಿ ಧೋರಣೆ ತೋರುತ್ತಿದೆ. ನಮ್ಮ ಗ್ರಾಮದ ಸ್ಥಿತಿಗತಿ, ನೆಲಸಮಗೊಂಡ ಅಪೂರ್ಣ ಕಾಮಗಾರಿಗಳು ಸರ್ಕಾರದ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿವೆ ಎಂದು ಅಳಲು ತೋಡಿಕೊಂಡಿದ್ದಾರೆ.

ABOUT THE AUTHOR

...view details