ಲಿಂಗಸುಗೂರು: ಏಳೂರು ಒಡೆಯನೆಂಬ ಖ್ಯಾತಿಯ ಕುಪ್ಪಿಭೀಮ ದೇವರ ಮಹಾ ರಥೋತ್ಸವಕ್ಕೂ ಮುನ್ನ ಬೆಳಗ್ಗಿನ ಜಾವ ರಥಾಂಗ ಹೋಮ ನಡೆಸಿದ ಬ್ರಾಹ್ಮಣರು ರಥ ಎಳೆದು ಜಾತ್ರೆಗೆ ಚಾಲನೆ ನೀಡಿದರು.
ಲಿಂಗಸುಗೂರು ಗ್ರಾಮದ ಆರಾಧ್ಯದೈವ ಕುಪ್ಪಿಭೀಮ ದೇವರ ಜಾತ್ರಾ ಮಹೋತ್ಸವವನ್ನು ಸಾಂಪ್ರದಾಯಿಕವಾಗಿ ಹೊಸ್ತಿಲು ಹುಣ್ಣಿಮೆ ದಿನ ಆಚರಿಸುವುದು ವಾಡಿಕೆ. ಗ್ರಾಮದಲ್ಲಿ ವಿವಿಧ ದೇವಸ್ಥಾನಗಳಲ್ಲಿ ಕಾರ್ತಿಕೋತ್ಸವದ ನಿಮಿತ್ತ ಆಚರಿಸುವ ದೀಪಗಳ ನಿಮಜ್ಜನೆ ಮೂಲಕ ಕುಪ್ಪಿಭೀಮ ದೇವರ ಗರ್ಭಗುಡಿ ತೆರೆದು ಪೂಜೆ ನಡೆಸಿ ಹೂ, ಬೆಳ್ಳಿ ಸಾಮಗ್ರಿಗಳಿಂದ ಅಲಂಕಾರ ಮಾಡಲಾಯಿತು. ಪೂಜಾರಿ ಮನೆತನದವರಿಂದ ಕಳಸ ತಂದು ರಥಕ್ಕೆ ಕಳಸಾರೋಹಣ ನೆರವೇರಿಸುತ್ತಿದ್ದಂತೆ ರಥಾಂಗ ಹೋಮದ ಪೂರ್ಣಾಹುತಿ ಸಲ್ಲಿಸಿ ಉತ್ಸವ ಮೂರ್ತಿ ಪ್ರತಿಷ್ಠಾಪಿಸಲಾಯಿತು.