ಕರ್ನಾಟಕ

karnataka

ETV Bharat / state

ತುಂಗಭದ್ರಾದಿಂದ ಭಾರಿ ಪ್ರಮಾಣದ ನೀರು ಬಿಡುಗಡೆ.. ಜನ ಜೀವನ ಅಸ್ತವ್ಯಸ್ತ.. - ಜಿಲ್ಲೆಯ ಸಿಂಧನೂರು ತಾಲೂಕಿನ ಚಿಂತಮಾದೊಡ್ಡಿ ಜಲಾವೃತ

ಜಿಲ್ಲೆಯ ಸಿಂಧನೂರು ತಾಲೂಕಿನ ಚಿಂತಮಾದೊಡ್ಡಿ ಜಲಾವೃತಗೊಂಡಿದೆ. ಬಾಲಾಜಿ ಕ್ಯಾಂಪ್​ದ ಬೈರೇಶ್ವರ ಕ್ಯಾಂಪ್ ಮಧ್ಯೆ ಸಂಪರ್ಕ ಕಲ್ಪಿಸುವ ಸೇತುವೆ ಮುಳುಗಡೆಗೊಂಡು, ರಸ್ತೆ ಸಂಪರ್ಕ ಸ್ಥಗಿತಗೊಂಡಿದೆ.

ತುಂಗಭದ್ರಾದಿಂದ ಭಾರಿ ಪ್ರಮಾಣದ ನೀರು ಬಿಡುಗಡೆ:

By

Published : Aug 13, 2019, 8:20 AM IST

ರಾಯಚೂರು: ತುಂಗಭದ್ರಾ ಜಲಾಶಯದಿಂದ ಲಕ್ಷಾಂತರ ಕ್ಯೂಸೆಕ್​ ನೀರು ಹರಿಬಿಟ್ಟ ಪರಿಣಾಮ ನದಿ ಪಾತ್ರದಲ್ಲಿ ಜನ ಜೀವನ ಅಸ್ತವ್ಯಸ್ತಗೊಳಿಸಿದೆ.

ಜಿಲ್ಲೆಯ ಸಿಂಧನೂರು, ಮಾನವಿ, ರಾಯಚೂರು ತಾಲೂಕುಗಳ ನದಿ ಪಾತ್ರ ಜನರಿಗೆ ತೊಂದರೆ ಉಂಟಾಗಿದೆ. ಹೊಲಕ್ಕೆ ನೀರು ಹರಿಸುವ ಉದ್ದೇಶದಿಂದ ರೈತರು ನದಿಯಲ್ಲಿ ಅಳವಡಿಸಿದ್ದ ಪಂಪ್​ಸೆಟ್​ಗಳು ನೀರುಪಾಲಾಗಿವೆ.

ತುಂಗಭದ್ರಾದಿಂದ ಭಾರಿ ಪ್ರಮಾಣದ ನೀರು ಬಿಡುಗಡೆ..

ಜಿಲ್ಲೆಯ ಸಿಂಧನೂರು ತಾಲೂಕಿನ ಚಿಂತಮಾದೊಡ್ಡಿ ಜಲಾವೃತಗೊಂಡಿದೆ. ಬಾಲಾಜಿ ಕ್ಯಾಂಪ್​ದ ಬೈರೇಶ್ವರ ಕ್ಯಾಂಪ್ ಮಧ್ಯೆ ಸಂಪರ್ಕ ಕಲ್ಪಿಸುವ ಸೇತುವೆ ಮುಳುಗಡೆಗೊಂಡು, ರಸ್ತೆ ಸಂಪರ್ಕ ಸ್ಥಗಿತಗೊಂಡಿದೆ.

ಈಗಾಗಲೇ ಕೃಷ್ಣ ನದಿಯಿಂದ ಜಿಲ್ಲೆ ಪ್ರವಾಹ ಪರಿಸ್ಥಿತಿ ಎದುರಿಸುತ್ತಿತ್ತು. ಈಗ ತುಂಗಭದ್ರಾ ನದಿಯ ಪ್ರವಾಹ ಎದುರಾಗಿರುವುದು ಜಿಲ್ಲೆಯ ಜನರಿಗೆ ನುಂಗಲಾರದ ತುತ್ತಾಗಿ ಪರಿಣಾಮಿಸಿದೆ. ಮುನ್ನೆಚ್ಚರಿಕಾ ಕ್ರಮವಾಗಿ ದಢೇಸೂಗೂರಿನ ಸರ್ಕಾರಿ ಶಾಲೆ, ಗ್ರಾಮ ಪಂಚಾಯತ್ ಹಾಗೂ ಉರ್ದುಶಾಲೆ, ಸಿಂಗಾಪೂರದ ಮುಕುಂದ ಸರ್ಕಾರಿ ಶಾಲೆ ಹಾಗೂ ಬಾಲಾಜಿ ಕ್ಯಾಂಪ್​ನ ಸರ್ಕಾರಿ ಶಾಲೆಯಲ್ಲಿ ತಾತ್ಕಾಲಿಕ ಪರಿಹಾರ ಕೇಂದ್ರಗಳನ್ನು ಆರಂಭಿಸಲಾಗಿದೆ.

ABOUT THE AUTHOR

...view details