ರಾಯಚೂರು: ಜಿಲ್ಲೆಯ ಲಿಂಗಸೂಗೂರು ತಾಲೂಕಿನ ನಾನಾ ಗ್ರಾಮಗಳಲ್ಲಿ ಕಳ್ಳಭಟ್ಟಿ ತಯಾರಿಸುತ್ತಿರುವುದು ಬೆಳಕಿಗೆ ಬಂದಿದೆ.
ಕೊರೊನಾ ಲಾಕ್ಡೌನ್ ನಡುವೆಯೂ ಎಗ್ಗಿಲ್ಲದೇ ನಡೀತಿದೆ ಕಳ್ಳಭಟ್ಟಿ ದಂಧೆ! - hooch selling in raichur villages
ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಹಲವು ಗ್ರಾಮಗಳಲ್ಲಿ ಕಳ್ಳಭಟ್ಟಿ ತಯಾರಿಸಿ ಮಾರಾಟ ಮಾಡಲಾಗುತ್ತಿದೆ. ಲಾಕ್ಡೌನ್ ಇವರ ಮೇಲೆ ಯಾವುದೇ ಪರಿಣಾಮವನ್ನೇ ಬೀರಿಲ್ಲ.
ಕಳ್ಳಭಟ್ಟಿ
ಲಿಂಗಸೂಗೂರು ತಾಲೂಕಿನ ಭೂಪೂರ ತಾಂಡಾದಲ್ಲಿ ಕಳ್ಳಭಟ್ಟಿ ತಯಾರಿಕೆ ಮಾಡಿ ಮಾರಾಟ ಮಾಡಲಾಗುತ್ತಿದ್ದು, ಇದಕ್ಕಾಗಿ ಸುತ್ತಮುತ್ತಲಿನ ಗ್ರಾಮದ ಜನರು ಸಹ ಬಂದು ಕಳ್ಳಭಟ್ಟಿ ಸೇವನೆ ಮಾಡುತ್ತಿದ್ದಾರೆ. ಲಾಕ್‌ಡೌನ್‌ನಿಂದಾಗಿ ಮದ್ಯದಂಗಡಿ ಬಂದ್ ಮಾಡಿರುವುದರಿಂದ ಮದ್ಯ ಸಿಗದ ಕಾರಣ ತಾಂಡಾದಲ್ಲಿ ಕಳ್ಳಭಟ್ಟಿ ತಯಾರಿ ಮಾಡುವ ಸ್ಥಳಕ್ಕೆ ಬಂದು ಜನರು ಕಳ್ಳಭಟ್ಟಿ ಕುಡಿಯುತ್ತಿದ್ದಾರೆ.
ಅಬಕಾರಿ ಇಲಾಖೆ ಕಳ್ಳಭಟ್ಟಿ ತಯಾರಿಕೆ, ಮಾರಾಟಕ್ಕೆ ಬ್ರೇಕ್ ಹಾಕುವಲ್ಲಿ ವಿಫಲವಾಗಿರುವ ಆರೋಪ ಕೇಳಿ ಬಂದಿದೆ.