ರಾಯಚೂರು: ಕೊರೊನಾ ಕರಿನೆರಳು ಹಟ್ಟಿ ಚಿನ್ನದ ಗಣಿ ಮೇಲೂ ಬಿದ್ದಿದ್ದು, ಮಾರ್ಚ್ 24ರಿಂದ 31ರವರೆಗೆ ಕಾರ್ಯ ಸ್ಥಗಿತಗೊಳಿಸಿ ಹಟ್ಟಿ ಚಿನ್ನದ ಗಣಿ ಕಂಪನಿ(ಹಚಿಗ) ಪ್ರಕಟಣೆ ಹೊರಡಿಸಿದೆ.
ಕೊರೊನಾ 'ಲಾಕ್ ಡೌನ್': ಕಾರ್ಯ ಸ್ಥಗಿತಗೊಳಿಸಿದ ಹಟ್ಟಿ ಚಿನ್ನದ ಗಣಿ - ಕೊರೊನಾ ರೋಗ
ರಾಜ್ಯದಲ್ಲಿ ಕೊರೊನಾ ಹಾವಳಿ ಮುಂದುವರೆದಿದ್ದು, ಹಟ್ಟಿ ಚಿನ್ನದ ಗಣಿ ತನ್ನ ಕಾರ್ಯವನ್ನು ಮಾರ್ಚ್ 24ರಿಂದ 31ರವರೆಗೆ ಸ್ಥಗಿತಗೊಳಿಸಿ ಪ್ರಕಟಣೆ ಹೊರಡಿಸಿದೆ.
ಅತ್ಯಾವಶ್ಯಕ ಸೇವೆಗಳು, ನಿರ್ವಹಣೆ ಹೊರತುಪಡಿಸಿ ಉಳಿದಂತೆ ಎಲ್ಲಾ ಸೇವೆಗಳನ್ನು ಸ್ಥಗಿತಗೊಳಿಸಿದೆ. ಅಧಿಕಾರಿ ಮತ್ತು ಸಿಬ್ಬಂದಿ ಮನೆಯಲ್ಲಿದ್ದು ಕೆಲಸ ನಿರ್ವಹಿಸಬೇಕು. ಆನ್ಲೈನ್ ಮೂಲಕ ಕೆಲಸ ನಿರ್ವಹಿಸುವ ಸಿಬ್ಬಂದಿ ಅನಿವಾರ್ಯ ಸಂದರ್ಭದಲ್ಲಿ ಕರೆ ಮಾಡಿದಾಗ ಹಾಜರಾಗಬೇಕು. ಉಳಿದ ಕಾರ್ಮಿಕರಿಗೆ ವೇತನ ಸಹಿತ ರಜೆ ನೀಡಲಾಗಿದೆ.
ಸಂದರ್ಶಕರಿಗೆ ಅವಕಾಶಗಳಿಲ್ಲ. ಇಲ್ಲಿನ ಆಸ್ಪತ್ರೆಗೂ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ. ಕಂಪನಿಯ ಕ್ಲಬ್ ಮತ್ತು ಇನ್ಸ್ಟಿಟ್ಯೂಟ್ಗಳನ್ನು ಮುಂದಿನ ಆದೇಶದವರೆಗೆ ಮುಚ್ಚಲಾಗುವುದು. ಕಾರ್ಮಿಕರಿಗೆ ಕೊರೊನಾ ವೈರಸ್ ಹರಡದಂತೆ ಜಾಗೃತಿ ವಹಿಸುವ ದೃಷ್ಟಿಯಿಂದ ಕಂಪನಿ ಮುಖ್ಯ ಆಡಳಿತ ಜಾಗೃತ ಮತ್ತು ಸುರಕ್ಷಿತ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.