ರಾಯಚೂರು: ದೇಶದಲ್ಲಿಯೇ ಅತಿ ಹೆಚ್ಚು ಚಿನ್ನ ಉತ್ಪಾದನೆ ಮಾಡುವ ಹಟ್ಟಿ ಚಿನ್ನದ ಗಣಿ ಸಂಸ್ಥೆಯು ಮುಖ್ಯಮಂತ್ರಿ ಪರಿಹಾರ ನಿಧಿಗೆ 5 ಕೋಟಿ ರೂಪಾಯಿ ದೇಣಿಗೆ ನೀಡಿದೆ.
ಸಿಎಂ ಪರಿಹಾರ ನಿಧಿಗೆ 5 ಕೋಟಿ ರೂಪಾಯಿ ದೇಣಿಗೆ ನೀಡಿದ ಹಟ್ಟಿ ಚಿನ್ನದ ಗಣಿ - ಹಟ್ಟಿ ಚಿನ್ನದ ಗಣಿ
ದೇಶದಲ್ಲಿಯೇ ಅತಿ ಹೆಚ್ಚು ಚಿನ್ನ ಉತ್ಪಾದನೆ ಮಾಡುವ ಹಟ್ಟಿ ಚಿನ್ನದ ಗಣಿ ಸಂಸ್ಥೆಯು ಮುಖ್ಯಮಂತ್ರಿ ಪರಿಹಾರ ನಿಧಿಗೆ 5 ಕೋಟಿ ರೂಪಾಯಿ ದೇಣಿಗೆ ನೀಡಿದೆ. ಈ ಮೂಲಕ ಈ ಹಣವನ್ನು ಕೊರೊನಾ ನಿರ್ವಹಣೆಗೆ ಬಳಸುವಂತೆ ಮನವಿ ಮಾಡಿದೆ.
ಸಿಎಂಗೆ ನಿಧಿಗೆ 5 ಕೋಟಿ ದೇಣಿಕೆ ನೀಡಿದ ಹಟ್ಟಿಗಣಿ
ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಸಿ.ಸಿ. ಪಾಟೀಲ್ ಖುದ್ದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದರು. ಬಳಿಕ 5 ಕೋಟಿ ರೂ.ಗಳ ಚೆಕ್ನ್ನು ಕೋವಿಡ್-19 ನಿರ್ವಹಣೆ ಮಾಡಲು ಕೋರಿದರು.
ಈ ವೇಳೆ ಹಟ್ಟಿ ಚಿನ್ನದ ಗಣಿ ವ್ಯವಸ್ಥಾಪಕ ನಿರ್ದೇಶಕಿ ಸಲ್ಮಾ ಕೆ. ಫಾಯಿಮಾ ಉಪಸ್ಥಿತರಿದ್ದರು.