ಕರ್ನಾಟಕ

karnataka

ETV Bharat / state

ಲಿಂಗಸುಗೂರು ಉಪ ಕಾರಾಗೃಹದ ಅಧಿಕಾರಿ ಸೇರಿ ನಾಲ್ವರಿಗೆ ಕೊರೊನಾ - ರಾಯಚೂರು ಜಿಲ್ಲಾ ಸುದ್ದಿ

ರಾಯಚೂರಿನ ಲಿಂಗಸಗೂರು ತಾಲೂಕಿನಲ್ಲಿ ಉಪ ಕಾರಾಗೃಹದ ಅಧಿಕಾರಿ ಮತ್ತು ಆತನ ಪತ್ನಿ, ಮಗಳಿಗೆ ಕೊರೊನಾ ಸೋಂಕು ತಗುಲಿದೆ. ಹಾಗೆಯೇ ಬಿಎಂಟಿಸಿ ಚಾಲಕನ ತಾಯಿಗೆ ಕೊರೊನಾ ಅಂಟಿದ್ದು, ರಾಯಚೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

sub-jail
ಲಿಂಗಸುಗೂರು ಉಪ ಕಾರಾಗೃಹ

By

Published : Jul 14, 2020, 12:42 PM IST

ಲಿಂಗಸುಗೂರು (ರಾಯಚೂರು): ಉಪ ಕಾರಾಗೃಹದ ಸೂಪರಿಂಟೆಂಡೆಂಟ್ ಸೇರಿದಂತೆ ನಾಲ್ವರಿಗೆ ಕೊರೊನಾ ಸೋಂಕು ದೃಢಪಟ್ಟಿವೆ. ರೋಗಿ ಸಂಖ್ಯೆ-40,077 (ಸೂಪರಿಂಟೆಂಡೆಂಟ್), ರೋಗಿ ಸಂಖ್ಯೆ-40,081 (ಪತ್ನಿ), ರೋಗಿ ಸಂಖ್ಯೆ-40,087ಗೆ (ಪುತ್ರಿ) ಸೋಂಕು ತಗುಲಿದೆ.

ಅಧಿಕಾರಿ ಕೆಲ ದಿನಗಳ ಹಿಂದೆ ವಿಜಯಪುರ ಜಿಲ್ಲೆಗೆ ಮದುವೆ ಸಮಾರಂಭಕ್ಕೆ ಹೋಗಿ ಬಂದಿದ್ದರು. ಆರೋಗ್ಯದಲ್ಲಿ ಏರುಪೇರು ಕಂಡು ಬಂದ ಕಾರಣ ಕುಟುಂಬಸ್ಥರು, ರಾಯಚೂರಲ್ಲಿ ಚಿಕಿತ್ಸೆ ಪಡೆದು ಪರೀಕ್ಷೆಗೆಂದು ಗಂಟಲು ದ್ರವ ನೀಡಿದ್ದರು.

ಉಪ ಕಾರಾಗೃಹದಲ್ಲಿ ನಾಲ್ವರು ಸಿಬ್ಬಂದಿ, 28 ಕೈದಿಗಳು ಇದ್ದಾರೆ. ಅಧಿಕಾರಿಗೆ ಕೋವಿಡ್ ಕಾಣಿಸಿಕೊಂಡಿದ್ದರಿಂದ ಎಲ್ಲರೂ ಆತಂಕಕ್ಕೆ ಒಳಗಾಗಿದ್ದಾರೆ. ಕಾರಾಗೃಹಕ್ಕೆ ಪುರಸಭೆ ಸಿಬ್ಬಂದಿ ಸ್ಯಾನಿಟೈಸ್​​ ಮಾಡಿದ್ದಾರೆ.

ಚಾಲಕನ ತಾಯಿಗೆ ಕೋವಿಡ್​:ತಾಲೂಕಿನ ಪೂಲಭಾವಿ ಗ್ರಾಮದಲ್ಲಿ ಕೋವಿಡ್ ಪೀಡಿತರಾಗಿದ್ದ ಬಿಎಂಟಿಸಿ ಚಾಲಕನ ತಾಯಿಗೆ (ರೋಗಿ ಸಂಖ್ಯೆ-40,089) ಸೋಂಕು ಅಂಟಿದೆ.

ABOUT THE AUTHOR

...view details