ಕರ್ನಾಟಕ

karnataka

ETV Bharat / state

ಪರಿಹಾರ ಕೊಡುವವರೆಗೂ ಕದಲುವುದಿಲ್ಲ ಎಂದು ಪಟ್ಟು ಹಿಡಿದ ನೆರೆ ಸಂತ್ರಸ್ತರು

ಕೃಷ್ಣಾ ನದಿ ಪ್ರವಾಹದಿಂದ ರಾಯಚೂರು ಜಿಲ್ಲೆಯ ನಡುಗಡ್ಡೆ ಪ್ರದೇಶಗಳು ಸಂಪೂರ್ಣ ಹಾನಿಗೊಂಡಿರುವ ಪರಿಣಾಮ ಅಲ್ಲಿನ ನಿವಾಸಿಗಳನ್ನು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ.

flood affected area residents chit-chat

By

Published : Aug 29, 2019, 10:23 PM IST

ರಾಯಚೂರು:ಕೃಷ್ಣಾ ನದಿ ಪ್ರವಾಹದಿಂದ ರಾಯಚೂರು ಜಿಲ್ಲೆಯ ನಡುಗಡ್ಡೆ ಪ್ರದೇಶಗಳು ಸಂಪೂರ್ಣ ಹಾನಿಗೊಂಡಿರುವ ಪರಿಣಾಮ ಅಲ್ಲಿನ ನಿವಾಸಿಗಳನ್ನು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ.

ನಾರಾಯಣಪುರ ಜಲಾಶಯದಿಂದ 6 ಲಕ್ಷಕ್ಕೂ ಅಧಿಕ ಕ್ಯೂಸೆಕ್​​ ನೀರನ್ನು ನದಿಗೆ ಬಿಟ್ಟಿದ್ದರಿಂದ ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಮ್ಯಾದರಗಡ್ಡಿ, ಕಡದರಗಡ್ಡಿ, ಕರಕಲಗಡ್ಡಿ ಸೇರಿದಂತೆ ಹಲವು ನಡುಗಡ್ಡೆ ಪ್ರದೇಶಗಳಿಗೆ ನೀರು ನುಗ್ಗಿತ್ತು. ಇದಕ್ಕೂ ಮೊದಲೇ ಜಿಲ್ಲಾಡಳಿತದಿಂದ ನಡುಗಡ್ಡೆ ನಿವಾಸಿಗಳನ್ನು ಸುರಕ್ಷಿತ ಸ್ಥಳಕ್ಕೆ ಕರೆತಂದು ಪರಿಹಾರ ಕೇಂದ್ರದಲ್ಲಿ ಇರಿಸಲಾಗಿತ್ತು.

ಸಂತ್ರಸ್ತರೊಂದಿಗೆ ಚಿಟ್​-ಚಾಟ್​

ಆದ್ರೆ, ಪರಿಹಾರ ಕೇಂದ್ರದಲ್ಲಿರುವ ಸಂತ್ರಸ್ತರಿಗೆ ಶಾಶ್ವತ ಪರಿಹಾರ ದೊರಕಿಸಿಕೊಡುವ ಭರವಸೆ ನೀಡಲಾಗಿತ್ತು. ಹೀಗಾಗಿ ನಮಗೆ ಶಾಶ್ವತ ಸೂರು ಕಲ್ಪಿಸಿಕೊಡಬೇಕು. ಪರಿಹಾರ ಒದಗಿಸಬೇಕು. ಅಲ್ಲಿಯವರೆಗೂ ಪರಿಹಾರ ಕೇಂದ್ರ ಬಿಟ್ಟು ಹೋಗುವುದಿಲ್ಲ ಎಂದು ಸಂತ್ರಸ್ತರು ಪಟ್ಟು ಹಿಡಿದಿದ್ದಾರೆ. ಈ ಕುರಿತು 'ಈಟಿವಿ ಭಾರತ' ಪ್ರತಿನಿಧಿ ಅಲ್ಲಿರುವ ಸಂತ್ರಸ್ತರೊಂದಿಗೆ ನಡೆಸಿರುವ ಚಿಟ್​-ಚಾಟ್ ಇಲ್ಲಿದೆ ನೋಡಿ.

ABOUT THE AUTHOR

...view details