ಬೆಂಗಳೂರು:ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಗಬ್ಬೂರು ಹೋಬಳಿಯನ್ನು ತಾಲೂಕು ಕೇಂದ್ರವಾಗಿ ಘೋಷಣೆ ಮಾಡಬೇಕು ಎಂದು ಗಬ್ಬೂರು ತಾಲೂಕು ಹೋರಾಟ ಸಮಿತಿಯ ಮುಖಂಡರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದರು.
ಮುಖ್ಯಮಂತ್ರಿಗಳ ಅಧಿಕೃತ ನಿವಾಸಕ್ಕೆ ಗಬ್ಬೂರು ಗ್ರಾಮದ ರೈತರ ನಿಯೋಗ ಭೇಟಿ ನೀಡಿತು. 25ಕ್ಕೆ ಹೆಚ್ಚು ರೈತರು ಜವಾವಣೆಗೊಂಡ ಹಿನ್ನಲೆಯಲ್ಲಿ ಪೊಲೀಸರು ಆತಂಕಕ್ಕೆ ಒಳಗಾದರಾದರು. ನಂತರ ಅಗತ್ಯ ಭದ್ರತೆಯೊಂದಿಗೆ ರೈತ ಮುಖಂಡರನ್ನು ಮಾತ್ರ ಸಿಎಂ ನಿವಾಸ ಕಾವೇರಿಗೆ ಪ್ರವೇಶಿಸಲು ಅನುಮತಿ ನೀಡಿದರು.
ಸಿಎಂ ಭೇಟಿ ಮಾಡಿದ ನಿಯೋಗ, ಸ್ಥಳೀಯ ಶಾಸಕ ಶಿವನಗೌಡ ನಾಯಕ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿತು. ಜನಸಂಖ್ಯೆಯಲ್ಲಿ ಗಬ್ಬೂರು ಹೋಬಳಿ ಜಾಸ್ತಿ ಇದೆ. ಆದರೆ ಶಾಸಕರ ಕೈವಾಡದಿಂದ ಅರಕೇರಾವನ್ನು ತಾಲೂಕು ಎಂದು ಘೋಷಣೆ ಮಾಡಿದ್ದಾರೆ. ನಮಗೆ ನ್ಯಾಯ ಕೊಡಿಸಿ, ಗಬ್ಬೂರು ಹೋಬಳಿಯನ್ನು ತಾಲ್ಲೂಕು ಎಂದು ಘೋಷಣೆ ಮಾಡುವಂತೆ ಮನವಿ ಸಲ್ಲಿಸಿತು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಹೋರಾಟ ಸಮಿತಿ ಅಧ್ಯಕ್ಷ ಬುಡ್ಡನಗೌಡ, ಅಧಿಕಾರ ದುರುಪಯೋಗ ಮಾಡಿಕೊಂಡ ಶಾಸಕ ಶಿವನಗೌಡ ನಾಯಕ್ಇಡೀ ದೇವದುರ್ಗ ಜನ ರೊಚ್ಚಿಗೆ ಎದಿದ್ದಾರೆ. ಯಾವುದೇ ಕಾರಣಕ್ಕೂ ನಾವು ಸುಮ್ಮನೆ ಬಿಡಲ್ಲ. ಇದರ ವಿರುದ್ಧ ದೊಡ್ಡ ಮಟ್ಟದಲ್ಲಿ ಹೋರಾಟ ಮಾಡುತ್ತೇವೆ. ನ್ಯಾಯವಾಗಿ ಗಬ್ಬೂರು ತಾಲೂಕು ಮಾಡಬೇಕು ಎಂದರು.
ಈಗ ಅರಕೇರಾವನ್ನು ತಾಲೂಕು ಮಾಡಿರುವುದು ಸಂಪೂರ್ಣ ಅವೈಜ್ಞಾನಿಕವಾಗಿದೆ. ಇದರಲ್ಲಿ ತಪ್ಪು ಮಾಡಿರುವುದು ಎಲ್ಲ ಸಚಿವರಿಗೆ ಗೊತ್ತಾಗಿದೆ. ನಮ್ಮ ನೋವನ್ನು ಕೇವಲ ಸರ್ಕಾರಕ್ಕೆ ಮಾತ್ರ ತಿಳಿಸಲ್ಲ. ಪ್ರತಿಪಕ್ಷ ನಾಯಕರಿಗೂ ತಿಳಿಸಿದ್ದೇವೆ. ಸದ್ಯಕ್ಕಂತು ಯಾವುದನ್ನು ಹೊಸ ತಾಲೂಕು ಎಂದು ಘೋಷಣೆ ಮಾಡಲ್ಲ ಎಂದು ಸಿಎಂ ಹೇಳಿದ್ದಾರೆ. ಆದರೆ ತಪ್ಪಾಗಿರೋದನ್ನು ಪರಿಶೀಲಿನೆ ಮಾಡುವುದಾಗಿ ಭರವಸೆ ನೀಡಿದ್ದಾರೆ. ನ್ಯಾಯ ಸಿಗುವವರೆಗೂ ಹೋರಾಟ ಮಾಡುತ್ತೇವೆ ಎಂದು ಹೇಳಿದರು.