ಕರ್ನಾಟಕ

karnataka

ETV Bharat / state

ರಾಯಚೂರು: ಬಾವಿ ನೋಡಲು ಹೋಗಿ ಕಾಲು ಜಾರಿ ಬಿದ್ದು ಇಬ್ಬರ ಸಾವು - fall into the water two died

ಸಂಬಂಧಿಕರ ಮನೆಗೆ ಕಾರ್ಯಕ್ರಮವೊಂದಕ್ಕೆ ಹೋದ ಮೂವರು ಬಾವಿಯನ್ನು ವೀಕ್ಷಿಸುತ್ತಿದ್ದ ವೇಳೆ ಕಾಲು ಜಾರಿ ಬಿದ್ದಿದ್ದಾರೆ. ಅಲ್ಲೇ ಇದ್ದವರು ರಕ್ಷಿಸಲು ಪ್ರಯತ್ನಿಸಿದರೂ ಒಬ್ಬರನ್ನಷ್ಟೇ ಉಳಿಸಲು ಸಾಧ್ಯವಾಗಿ, ಇನ್ನಿಬ್ಬರು ಸಾವನ್ನಪ್ಪಿದ್ದಾರೆ.

fall-into-the-water-pits-one-yound-woman-a-girl-died
ನೀರಿನ ಹೊಂಡದಲ್ಲಿ ಬಿದ್ದು ಓರ್ವ ಯುವತಿ, ಬಾಲಕಿ ಸಾವು

By

Published : May 30, 2022, 11:19 AM IST

Updated : May 31, 2022, 5:32 PM IST

ರಾಯಚೂರು: ಬಾವಿಯಲ್ಲಿ ಬಿದ್ದು ಓರ್ವ ಯುವತಿ, ಮತ್ತೋರ್ವ ಬಾಲಕಿ ಮೃತಪಟ್ಟಿರುವ ದಾರುಣ ಘಟನೆ ತಾಲೂಕಿನ ಯರಗೇರಾ ಗ್ರಾಮದಲ್ಲಿ ನಿನ್ನೆ ಜರುಗಿದೆ. ತಾಲೂಕಿನ ಯರಗೇರಾ ಗ್ರಾಮದ ಹೊರವಲಯದ ಬಾವಿಯಲ್ಲಿ ದುರ್ಘಟನೆ ಸಂಭವಿಸಿದೆ. ರಾಯಚೂರು ಮೂಲದ ಶಿರೀನ್(೧೯), ಮುಸ್ಕಾನ್(೧೭) ಮೃತರೆಂದು ಗುರುತಿಸಲಾಗಿದೆ.

ರಾಯಚೂರಿನಿಂದ ಶಿರೀನ್ ಹಾಗೂ ಮುಸ್ಕಾನ್ ಕುಟುಂಬದವರು ತಮ್ಮ ಸಂಬಂಧಿಕರ ಮನೆಯ ಕಾರ್ಯಕ್ರಮದಲ್ಲಿ ಭಾಗವಹಿಸಲು ಯರಗೇರಾ ಗ್ರಾಮಕ್ಕೆ ತೆರಳಿದ್ದರು. ಮೂವರು ತಮ್ಮ ಸಂಬಂಧಿಕರ ಮಾವಿನ ತೋಟವನ್ನು ವೀಕ್ಷಿಸಲು ತೆರಳಿದ್ದಾರೆ. ಈ ಸಮಯದಲ್ಲಿ ಮೇಲೆ ನಿಂತು ಬಾವಿ ನೋಡುವ ಸಮಯದಲ್ಲಿ ಕಾಲು ಜಾರಿದ್ದು, ಮೂವರು ನೀರಿನಲ್ಲಿ ಬಿದ್ದಿದ್ದಾರೆ.

ಮೂವರಲ್ಲಿ ಇಬ್ಬರು ಮೃತಪಟ್ಟರೆ, ಓರ್ವ ಯುವತಿಯನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಯರಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಮಡಿಕೇರಿ ಕೋಟೆ ಅಬ್ಬಿ ಜಲಪಾತದಲ್ಲಿ ಮುಳುಗಿ ಮೂವರು ಪ್ರವಾಸಿಗರು ಸಾವು

Last Updated : May 31, 2022, 5:32 PM IST

ABOUT THE AUTHOR

...view details