ರಾಯಚೂರು:ಕೊಳವೆಬಾವಿಯಲ್ಲಿ ಮೋಟರ್ ಅಳವಡಿಸುವ ವೇಳೆ ಕೊಳವೆ ಬಾವಿಯೊಳಗೆ ಸ್ಫೋಟ ಸಂಭವಿಸಿ ಏಳು ಜನ ಗಾಯಗೊಂಡಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.
ಕೊಳವೆ ಬಾವಿಯಲ್ಲಿ ಮೋಟರ್ ಅಳವಡಿಸುವ ವೇಳೆ ಸ್ಫೋಟ: 7 ಜನರಿಗೆ ಗಾಯ
ಕೊಳವೆ ಬಾವಿಯಲ್ಲಿ ಮೋಟರ್ ಅಳವಡಿಸುವ ವೇಳೆ ಕೊಳವೆ ಬಾವಿಯೊಳಗೆ ಸ್ಟಫೋ ಸಂಭವಿಸಿ ಏಳು ಜನ ಗಾಯಗೊಂಡಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.
ಜಿಲ್ಲೆಯ ಸಿರವಾರ ತಾಲೂಕಿನ ಹೀರಾ ಗ್ರಾಮದ ಅಂಬರೀಶ್ ನಾಯಕ ಎನ್ನುವವರ ಹೊಲದಲ್ಲಿ ಈ ಘಟನೆ ಜರುಗಿದೆ. ಗೌಸ್, ಇಬ್ರಾಹಿಂ, ಈಶ್ವರ್, ಶರೀಫ, ಭೀಮಣ್ಣ, ಹಂಪಯ್ಯ ಸೇರಿದಂತೆ ಏಳು ಜನರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನ ಕೂಡಲೇ ಕವಿತಾಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿ, ಬಳಿಕ ಹೆಚ್ಚಿನ ಚಿಕಿತ್ಸೆಗೆ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಈಗ ಗಾಯಾಳುಗಳು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಅಂಬರೀಶ್ ನಾಯಕನ ಹೊಲದಲ್ಲಿನ ಕೊಳವೆ ಬಾವಿಯಲ್ಲಿ ಮೋಟಾರು ಸುಟ್ಟು ಹೋಗಿದ್ದರಿಂದ ಅದನ್ನು ತೆಗೆದು ಬೇರೆ ಮೋಟಾರು ಇಳಿಸುವಾಗ ಮೋಟಾರು ಇಳಿಯದೇ ಅದರಲ್ಲಿ ಯಾವುದೋ ರಾಸಾಯನಿಕ ಹಾಕಿರುವುದು ಸ್ಫೋಟಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಸಿರವಾರ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.