ಕರ್ನಾಟಕ

karnataka

ETV Bharat / state

ಅ.16 ರಂದು ಕೆಪಿಸಿಸಿ ನೂತನ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ: ಡಿ ಕೆ ಶಿವಕುಮಾರ್ - ಕೆಪಿಸಿಸಿ ನೂತನ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ

ಅಕ್ಟೋಬರ್ 16 ರಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ನೂತನ ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಯಲಿದೆ. ನಾನು ಅಧ್ಯಕ್ಷನಾಗಿ ಎರಡು‌ ವರ್ಷ ಪೂರ್ಣವಾಗುತ್ತಿದೆ. ಮತ್ತೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಬಗ್ಗೆ ಕೊನೆಯ ದಿನದಂದು ನಿರ್ಧಾರವಾಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದರು.

dkshi
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್

By

Published : Sep 12, 2022, 3:19 PM IST

ರಾಯಚೂರು:ಕೆಪಿಸಿಸಿಯ ನೂತನ ಅಧ್ಯಕ್ಷರ ಆಯ್ಕೆಗೆ ಚುನಾವಣೆ ಅ.16 ರಂದು ನಡೆಯಲಿದೆ. ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲಾಗುತ್ತದೆ. ಅಧ್ಯಕ್ಷ ಸ್ಥಾನಕ್ಕೆ ಪಕ್ಷದ ನಿಯಮಾಳಿಗಳ‌ ಮಾನದಂಡದಂತೆ ಸದಸ್ಯರು ಸ್ಪರ್ಧೆ ಮಾಡಬಹುದಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ.

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಭಾರತ ಜೋಡೋ ಪೂರ್ವಭಾವಿ ಸಭೆಗೂ ಮುನ್ನ ಅವರು ಮಾತನಾಡಿದರು. ನೀವು ಮತ್ತೊಮ್ಮೆ ಸ್ಪರ್ಧೆ ಮಾಡುತ್ತೀರಾ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸದ್ಯ ನನ್ನ ಎರಡು ವರ್ಷ ಅವಧಿ ಮುಗಿಯುತ್ತಿದೆ. ಮತ್ತೆ ಸ್ಪರ್ಧೆ ಮಾಡಬೇಕೋ ಬೇಡವೋ ಎಂಬುದನ್ನು ನಾಯಕರು ತೀರ್ಮಾನ ಮಾಡುತ್ತಾರೆ ಎಂದು ಡಿಕೆಶಿ ಹೇಳಿದರು.

ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್

ದೇಶ ಒಗ್ಗೂಡಿಸಲು ಪಾದಯಾತ್ರೆ:ರಾಹುಲ್ ಗಾಂಧಿ ಸ್ಪರ್ಧೆ ಬಗ್ಗೆ ನನಗೆ ಗೊತ್ತಿಲ್ಲ. ರಾಜ್ಯ, ದೇಶ ಒಂದು ಮಾಡಲು ಅವರು ನಡೆಯುತ್ತಿದ್ದಾರೆ. ಬೆಲೆ ಏರಿಕೆ ತಪ್ಪಿಸಲು, ರೈತರಿಗೆ ಪ್ರೋತ್ಸಾಹ ಬೆಲೆ ಸಿಗಲು ನಡೆಯುತ್ತಿದ್ದಾರೆ. ಬಿಜೆಪಿಯವರು ಈಗ ಏನು ಬಯಲಿಗೆಳೆಯುತ್ತಾರೆ?.ಶೇ40ರಷ್ಟು ಕಮಿಷನ್ ಆರೋಪ ನಾವು ಮಾಡುತ್ತಿದ್ದೇವೆ. ಬಿಜೆಪಿಯ ಗೊಡ್ಡು ಬೆದರಿಕೆಗೆ ನಾವು ಹೆದರುವುದಿಲ್ಲ. ಯಾವ ಸವಾಲು ಬೇಕಾದರೂ ನಾವು ಎದುರಿಸಲು ಸಿದ್ಧವಾಗಿದ್ದೇವೆ ಎಂದು ಹೇಳಿದರು.

ಅಕ್ಟೋಬರ್ 22 ಮತ್ತು 23 ರಂದು ಭಾರತ ಜೋಡೋ ಪಾದಯಾತ್ರೆ ರಾಯಚೂರು ಜಿಲ್ಲೆಗೆ ಬರಲಿದೆ. ಕೃಷ್ಣಾ ನದಿಯಿಂದ ತುಂಗಭದ್ರಾ ನದಿವರೆಗೂ ಪಾದಯಾತ್ರೆ ನಡೆಸುವರು. ರಾಹುಲ್ ಗಾಂಧಿಯವರು ತಮ್ಮ ಕಬ್ಬಿಣದ ಕಾಲುಗಳ ಮೂಲಕ ಸಮಾಜದ ಎಲ್ಲ ಜನರನ್ನು ಜೋಡಿಸುವ ಕೆಲಸವನ್ನು ಸೂಜಿಯ ರೀತಿಯಲ್ಲಿ ಹೊಲಿಯುವ ಮೂಲಕ ಮಾಡುತ್ತಿದ್ದಾರೆ.

ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆಯಿಂದ ಬಿಜೆಪಿಗೆ ಟೆನ್ಶನ್ ಶುರುವಾಗಿದೆ: ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್

ಪೂರ್ವಸಭೆಯ ಬ್ಯಾನರ್​​ನಲ್ಲಿ ಸಿದ್ದರಾಮಯ್ಯ ಭಾವಚಿತ್ರ ಮಾಯವಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾನು ನನ್ನ ಫೋಟೋನೂ ಹಾಕಬೇಡಿ ಅಂದಿದ್ದೆ. ಫೋಟೋನೇ ರಾಜಕೀಯ ಅಲ್ಲ, ಫೋಟೋ ಹಾಕದಿದ್ದರೇ ಏನಾಯ್ತು?. ಸಿದ್ದರಾಮಯ್ಯ ಅವರು ಪ್ರತಿಪಕ್ಷದ ನಾಯಕರು, ಅವರ ಕೆಲಸ ಅವರು ಮಾಡುತ್ತಿದ್ದಾರೆ. ಅವರು ಬಂದಾಗ ಅವರ ಫೋಟೋ ಹಾಕುತ್ತಾರೆ ಎಂದರು.

ABOUT THE AUTHOR

...view details