ಕರ್ನಾಟಕ

karnataka

ETV Bharat / state

ಶೌಚಕ್ಕೆ ತೆರಳಿದ ಗೃಹಿಣಿ ನಾಪತ್ತೆ,ಪ್ರಕರಣ ದಾಖಲು - ರಾಯಚೂರು

ಬಹಿರ್ದೆಸೆಗೆ ತೆರಳಿದ ಗೃಹಿಣಿ ಕಾಣೆಯಾಗಿರುವ ಘಟನೆ ರಾಯಚೂರು ತಾಲೂಕಿನ ಮೀರಾಪೂರ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಈರಮ್ಮ, ಕಾಣೆಯಾಗಿರುವ ಮಹಿಳೆ

By

Published : May 19, 2019, 5:07 PM IST

ರಾಯಚೂರು :ಬಹಿರ್ದೆಸೆಗೆ ತೆರಳಿದ ಗೃಹಿಣಿ ಕಾಣೆಯಾಗಿರುವ ಘಟನೆ ಇಲ್ಲಿನ ಮೀರಾಪೂರ ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ರಾಯಚೂರು ತಾಲೂಕಿನ ಮೀರಾಪೂರ ಗ್ರಾಮದ ಈರಮ್ಮ(ರಾಜೇಶ್ವರಿ) ಎಂಬ ಗೃಹಿಣಿ ಎರಡು ದಿನಗಳಿಂದ ಕಾಣೆಯಾಗಿದ್ದಾರೆ. ಮೇ.17ರಂದು ಮನೆಯಲ್ಲಿ ಕುಟುಂಬದವರಲ್ಲಾ ಒಟ್ಟಿಗೆ ಊಟ ಮಾಡಲು ಕುಳಿತಿದ್ದರು. ಈ ವೇಳೆ ಬಹಿರ್ದೆಸೆಗೆ ಹೋಗಿ ಬರುವುದಾಗಿ ಮನೆಯಿಂದ ಹೊರ ಹೋದ ಈರಮ್ಮ ಮತ್ತೆ ವಾಪಾಸ್ಸಾಗಿಲ್ಲ.

ಸುಮಾರು 5 ಅಡಿ ಎತ್ತರವಿರುವ ಈರಮ್ಮ ಉದ್ದನೆಯ ಮುಖ ಹೊಂದಿದ್ದು, ತೆಲುಗು ಭಾಷೆ ಮಾತನಾಡುತ್ತಾರೆ ಎನ್ನಲಾಗಿದೆ.

ಯರಗೇರಾ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್‌ ಪ್ರಕರಣ ದಾಖಲಾಗಿದೆ.

ಈರಮ್ಮ, ಕಾಣೆಯಾಗಿರುವ ಮಹಿಳೆ

ABOUT THE AUTHOR

...view details