ರಾಯಚೂರು :ಡ್ಯಾನ್ಸರ್ ಆಗಬೇಕಾಗಿದ್ದ ಯುವಕ ಡೆಂಘೀ ಜ್ವರಕ್ಕೆ ಬಲಿಯಾಗಿದ್ದಾನೆ. ಜಿಲ್ಲೆಯ ಮಾನ್ವಿ ಪಟ್ಟಣದ ಜೈಭೀಮ ನಗರದ ಪಿಯುಸಿ ವಿದ್ಯಾರ್ಥಿ ನವೀನ್ ಕುಮಾರ್(18) ಮೃತರಾದವರು.
ಜ್ವರ ಕಾಣಿಸಿಕೊಂಡಾಗ ಆರಂಭದಲ್ಲಿ ಮಾನ್ವಿ ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಜ್ವರ ಕಡಿಮೆಯಾಗಿಲ್ಲ. ಆಗ ಹೆಚ್ಚಿನ ಚಿಕಿತ್ಸೆಗೆ ರಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಆದರೆ, ಚಿಕಿತ್ಸೆ ಫಲಕಾರಿಯಾಗಿದೆ ಮೃತಪಟ್ಟಿದ್ದಾನೆ ಎಂದು ಪೋಷಕರು ಹೇಳುತ್ತಿದ್ದಾರೆ. ರಿಮ್ಸ್ ಆಸ್ಪತ್ರೆಯಲ್ಲಿ ಸರಿಯಾಗಿ ಚಿಕಿತ್ಸೆ ದೊರೆತಿಲ್ಲ ಎಂದು ಕುಟುಂಬಸ್ಥರು ದೂರಿದ್ದಾರೆ.
ಡ್ಯಾನ್ಸರ್ ಆಗಬೇಕು ಎನ್ನುವ ಕನಸು ಹೊತ್ತುಕೊಂಡು ಕಾಲೇಜಿನ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಡ್ಯಾನ್ಸ್ ಸಹ ಮಾಡಿದ್ದ. ಆದ್ರೆ, ಇದೀಗ ಡೆಂಘೀಗೆ ಬಲಿಯಾಗಿದ್ದು, ಕುಟುಂಬಸ್ಥರನ್ನು ಕಣ್ಣೀರಲ್ಲಿ ಕೈತೊಳೆಯುವಂತೆ ಮಾಡಿದೆ.
ಮಾನ್ವಿ ಪಟ್ಟಣದಲ್ಲಿ ಈ ಹಿಂದೆ ಇಬ್ಬರು ಮಕ್ಕಳು ಶಂಕಿತ ಡೆಂಘೀ ಜ್ವರಕ್ಕೆ ಮೃತಪಟ್ಟಿದ್ದರು. ಇದೀಗ ಮತ್ತೆ ಯುವಕ ಮೃತಪಟ್ಟಿರುವುದು ಪಟ್ಟಣದ ಜನರಿಗೆ ಆತಂಕ ಮೂಡಿಸಿದೆ.