ಮೈಸೂರು:ದಸರಾ ಮಹೋತ್ಸವದಲ್ಲಿ ಹುಚ್ಚೆದ್ದು ಕುಣಿಯುವಂತೆ ಮಾಡುವ ಯುವ ದಸರಾಕ್ಕೆ ಅಕ್ಟೋಬರ್ 1 ರಂದು ಕ್ರೀಡಾತಾರೆ ಪಿ.ವಿ.ಸಿಂಧು ಚಾಲನೆ ನೀಡಲಿದ್ದು, ತೇರಿ ಮೇರಿ ಖ್ಯಾತಿಯ ಗಾಯಕಿ ರಾನುಮಂಡಲ್ ಗಾನಸುಧೆ ಹರಿಸಲಿದ್ದಾರೆ.
ಮಹಾರಾಜ ಕಾಲೇಜು ಮೈದಾನದಲ್ಲಿ ನಾಳೆಯಿಂದ ಅ.6ರವರೆಗೆ ನಡೆಯುವ ಯುವ ದಸರೆಯಲ್ಲಿ ಸ್ಯಾಂಡಲ್‌ವುಡ್, ಬಾಲಿವುಡ್‌ನ ಕಲಾವಿದರು, ಸಂಗೀತಗಾರರು ಜನರನ್ನು ಹುಚ್ಚೆಬ್ಬಿಸಲಿದ್ದಾರೆ.
- ಮೊದಲ ದಿನ ಚಿತ್ರ ನಿರ್ದೇಶಕ ನಾಗಶೇಖರ್ ತಂಡದಿಂದ ‘ಕೇಳದೆ ನಿಮಗೀಗ’ ವಿಶೇಷ ಕಾರ್ಯಕ್ರಮ ನಡೆಯಲಿದ್ದು, ಖ್ಯಾತ ಬಾಲಿವುಡ್ ಗಾಯಕರಾದ ಗುರು ರಾಂಧವ ಅವರು ಸಂಗೀತ ರಸಮಂಜರಿ ನಡೆಸಿಕೊಡಲಿದ್ದಾರೆ. ಇದರೊಂದಿಗೆ ಯುವ ಸಂಭ್ರಮದಿಂದ ಆಯ್ಕೆಯಾದ ಕಾಲೇಜು ತಂಡಗಳು ನೃತ್ಯ ಪ್ರದರ್ಶಿಸಲಿವೆ.
- ಅ.2ರಂದು ಬಾಲಿವುಡ್‌ನ ಗಾಯಕ ಮೋಹಿತ್ ಚೌಹಾಣ್ ಸಂಗೀತ ಕಾರ್ಯಯಕ್ರಮ ನೀಡಲಿದ್ದು, ಬಾಂಬೆ ತಂಡದಿಂದ ರಷ್ಯನ್ ಆಕ್ಟ್, ಕ್ವಿಕ್ ಏಂಜಲ್ಸ್ ಮತ್ತು ಬ್ಯಾಡ್ ಸಾಲ್ಸಾ ನೃತ್ಯ ಕಾರ್ಯಕ್ರಮ ನಡೆಯಲಿದೆ.
- ಅ.3ರಂದು ಮನಾಲಿ ಠಾಕೂರ್ ಗಾಯನ ಪ್ರಮುಖ ಆಕರ್ಷಣೆಯಾಗಿದ್ದು, 2015ರಲ್ಲಿ ಬಿಡುಗಡೆಯಾದ ಹಿಂದಿ ಸಿನಿಮಾ ‘ದಮ್ ಲಗಾಕೇ ಹೈಸಾ’ದಲ್ಲಿ ‘ಮೊ ಮೊ ಕೇ ದಾಗೇ’ ಗೀತೆ ಹಾಡಿ ರಾಷ್ಟ್ರೀಯ ಪ್ರಶಸ್ತಿ ಪಡೆದಿರುವ ಮೊನಾಲಿ ಠಾಕೂರ್ ಅವರು ತಮ್ಮ ಸುಮಧುರ ಕಂಠದಿಂದ ಯುವ ದಸರಾಗೆ ಕಿಚ್ಚು ಹಚ್ಚಲಿದ್ದಾರೆ. ಅದೇ ದಿನ ಸ್ಟಾರ್ ಸಿಂಗರ್ಸ್ ತಂಡದಿಂದ ಸಂಗೀತ ರಸಮಂಜರಿ ಹಾಗೂ ಮಂಗಳೂರಿನ ಬಾಯ್ಸ್ ರೆನ್ ತಂಡದಿಂದ ನೃತ್ಯ ಪ್ರದರ್ಶನ ನಡೆಯಲಿದೆ.