ಕರ್ನಾಟಕ

karnataka

ETV Bharat / state

ಫೇಸ್ ಬುಕ್ ಗೆಳತಿಯ ಸ್ಕೂಟರ್ ಕದ್ದೊಯ್ದ ಯುವಕ.. ಕಂಡ ಕಂಡವರ ಫ್ರೆಂಡ್​ ರಿಕ್ವೆಸ್ಟ್​ ಒಪ್ಪುವ ಮುನ್ನ ಎಚ್ಚರ - ಈಟಿವಿ ಭಾರತ ಕನ್ನಡ

ಯುವಕನ ಫ್ರೆಂಡ್​ ರಿಕ್ವೆಸ್ಟ್​ ಸ್ವೀಕರಿಸಿ ಸ್ಕೂಟಿ ಕಳೆದುಕೊಂಡ ಯುವತಿ - ಸ್ಕೂಟಿ ಕಳೆದುಕೊಂಡ ಮೈಸೂರಿನ ಯುವತಿ - ಎನ್ ಆರ್ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲು

young-lady-lost-her-scooty-after-trusting-her-facebook-friend-in-mysuru
ಮೈಸೂರು : ಫೇಸ್ ಬುಕ್ ಗೆಳತಿಯ ಸ್ಕೂಟರ್ ಕದ್ದೊಯ್ದ ಯುವಕ

By

Published : Jan 3, 2023, 3:35 PM IST

Updated : Jan 3, 2023, 3:42 PM IST

ಮೈಸೂರು :ಫೇಸ್​​ ಬುಕ್​ನಲ್ಲಿ ಪರಿಚಯವಿಲ್ಲದ ವ್ಯಕ್ತಿಯ ಫ್ರೆಂಡ್ ರಿಕ್ವೆಸ್ಟ್ ಸ್ವೀಕರಿಸಿ ಮೈಸೂರಿನ ಯುವತಿಯೊಬ್ಬರು ತಮ್ಮ ಸ್ಕೂಟರ್​ನ್ನು ಕಳೆದುಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಫೇಸ್ ಬುಕ್ ನಲ್ಲಿ ಪರಿಚಯವಾದ ಯುವಕ ಯುವತಿಯ ದ್ವಿಚಕ್ರ ವಾಹನವನ್ನು ಕಿತ್ತುಕೊಂಡು ಪರಾರಿಯಾಗಿದ್ದಾನೆ.

ನರಸಿಂಹ ರಾಜ ಮೊಹಲ್ಲಾದ 21 ವರ್ಷದ ಯುವತಿ ಸ್ಕೂಟಿ​ ಕಳೆದುಕೊಂಡವರು. ಈ ಸಂಬಂಧ ಎನ್ ಆರ್ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫೇಸ್​ಬುಕ್​​ ಫ್ರೆಂಡ್​ ನಂಬಿ ಸ್ಕೂಟಿ ಕಳೆದುಕೊಂಡಳು: ಡಿಸೆಂಬರ್ 19 ರಂದು ರೋಹಿತ್ ಸಿಜೂರ್ ಎಂಬ ಫೇಸ್ ಬುಕ್ ಅಕೌಂಟ್​ನಿಂದ ಯುವತಿಗೆ ಫ್ರೆಂಡ್​​ ರಿಕ್ವೆಸ್ಟ್ ಬಂದಿತ್ತು. ಯುವತಿ ಈ ಫ್ರೆಂಡ್​​ ರಿಕ್ವೆಸ್ಟ್​ನ್ನು ಸ್ವೀಕರಿಸಿದ್ದಾರೆ. ಬಳಿಕ ಡಿಸೆಂಬರ್ 26 ರಂದು ಆಕೆಗೆ ಯುವಕನಿಂದ ಕರೆ ಬಂದಿದೆ. ಈ ವೇಳೆ ಯುವತಿಯೊಂದಿಗೆ ಯುವಕ ಸಂಭಾಷಣೆ ನಡೆಸಿದ್ದಾನೆ ಎಂದು ಹೇಳಲಾಗಿದೆ.

ಮಂಕುಬೂದಿ ಎರಚಿದ ಚಾಲಾಕಿ.. ಮತ್ತೆ ಯುವತಿಗೆ ಕರೆ ಮಾಡಿದ್ದ ಯುವಕ, 'ನನ್ನ ಕಾಲಿಗೆ ಪೆಟ್ಟಾಗಿದೆ, ಸ್ವಲ್ಪ ಹಣ ಬೇಕೆಂದು ಕೇಳಿದ್ದಾನೆ. ಅಲ್ಲದೆ ಕೆಲವು ಕಂಪನಿಗಳಲ್ಲಿ ಹಣ ಹೂಡಿದರೆ ಹೆಚ್ಚಿನ ಲಾಭ ಬರುತ್ತದೆ. ಆ ಸಂಸ್ಥೆಗಳು ನನಗೆ ಗೊತ್ತು' ಎಂದು ಯುವತಿಯನ್ನು ನಂಬಿಸಿದ್ದಾನೆ. ಆದರೆ ಯುವತಿ ತನ್ನ ಬಳಿ ಹಣ ಇಲ್ಲ ಎಂದು ಹೇಳಿದ್ದಾಳೆ.

ಡಿಸೆಂಬರ್ 28ರಂದು ಮತ್ತೆ ಕರೆ ಮಾಡಿದ ಯುವಕ ಯುವತಿಗೆ ನಂಬಿಕೆ ಬರುವಂತೆ ಮಾತನಾಡಿದ್ದಾನೆ. ನಂತರ ಡಿಸೆಂಬರ್ 30ರಂದು ಪಡುವರಹಳ್ಳಿಯ ಸರ್ಕಲ್ ಬಳಿ ಕರೆಸಿಕೊಂಡು ಸ್ವಲ್ಪ ಸಮಯ ಮಾತನಾಡಿದ್ದಾನೆ. ಬಳಿಕ ನನ್ನ ಬೈಕನ್ನು ಸರ್ವೀಸ್ ಗೆ ಕೊಟ್ಟಿದ್ದೇನೆ. ತನ್ನನ್ನು ಮಣಿಪಾಲ್ ಜಂಕ್ಷನ್ ಬಳಿ ಇರುವ ಬೈಕ್ ಶೋ ರೂಂ ಬಳಿ ಬಿಡುವಂತೆ ಕೇಳಿಕೊಂಡಿದ್ದಾನೆ.

ಸ್ಕೂಟಿಯೊಂದಿಗೆ ಪರಾರಿಯಾದ ಯುವಕ: ಈ ಸಂದರ್ಭದಲ್ಲಿ ಯುವಕನೇ ಯುವತಿಯ ಸ್ಕೂಟಿಯನ್ನು ಚಲಾಯಿಸಿಕೊಂಡು ಹೋಗಿದ್ದಾನೆ. ಬಳಿಕ ಮಣಿಪಾಲ್ ಜಂಕ್ಷನ್ ಬಳಿ ಸ್ಕೂಟರನ್ನು ನಿಲ್ಲಿಸಿ, ನಿನ್ನ ಜೊತೆ ಮಾತನಾಡಬೇಕೆಂದು ಯುವತಿಯನ್ನು ಸ್ಕೂಟಿಯಿಂದ ಕೆಳಗೆ ಇಳಿಸಿದ್ದಾನೆ. ತಕ್ಷಣ ಯುವಕ ಸ್ಕೂಟರನ್ನು ವೇಗವಾಗಿ ಚಲಾಯಿಸಿ ಯುವಕ ಪರಾರಿಯಾಗಿದ್ದಾನೆ ಎಂದು ಯುವತಿ ತಿಳಿಸಿದ್ದಾಳೆ. ಈ ಸಂಬಂಧ ಎನ್ ಆರ್ ಪೋಲಿಸ್ ಠಾಣೆಯಲ್ಲಿ ಯುವತಿ ದೂರು ದಾಖಲಿಸಿದ್ದಾರೆ. ಯುವಕನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಇದನ್ನೂ ಓದಿ :ಕರೆ ಮಾಡುವುದಾಗಿ ಮೊಬೈಲ್ ಪಡೆದವನಿಂದ ಬ್ಲ್ಯಾಕ್ ಮೇಲ್: ಆರೋಪಿ ಬಂಧನ

Last Updated : Jan 3, 2023, 3:42 PM IST

ABOUT THE AUTHOR

...view details