ಮೈಸೂರು: ವಿಜಯದಶಮಿ ಹಿನ್ನೆಲೆಯಲ್ಲಿ ನಾಳೆ ಚಾಮುಂಡೇಶ್ವರಿ ರಥೋತ್ಸವ ನಡೆಯಲಿದ್ದು, ಸಂಪ್ರದಾಯದಂತೆ ರಾಜವಂಶಸ್ಥರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಚಾಲನೆ ನೀಡಲಿದ್ದಾರೆ.
ಚಾಮುಂಡೇಶ್ವರಿ ರಥೋತ್ಸವಕ್ಕೆ ಚಾಲನೆ ನೀಡಲಿರುವ ಯದುವೀರ್ - mysore king yaduvir
ವಿಜಯದಶಮಿ ಹಿನ್ನೆಲೆಯಲ್ಲಿ ಜರುಗಲಿರುವ ಚಾಮುಂಡೇಶ್ವರಿ ರಥೋತ್ಸವ ನಾಳೆ ನಡೆಯಲಿದೆ. ಸಂಪ್ರದಾಯದಂತೆ ರಾಜವಂಶಸ್ಥರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ರಥೋತ್ಸವಕ್ಕೆ ಚಾಲನೆ ನೀಡಲಿದ್ದಾರೆ.
ಚಾಮುಂಡೇಶ್ವರಿ ದೇವಸ್ಥಾನ
ಅಶ್ವಯುಜ ಶುಕ್ಲ ಪೂರ್ಣಿಮಿ ಉತ್ತರಭಾದ್ರ, ನಕ್ಷತ್ರ ತುಲಾ ಲಗ್ನದಲ್ಲಿ ಬೆಳಿಗ್ಗೆ 6.30 ರಿಂದ 7.15 ರ ಒಳಗೆ ಚಾಮುಂಡೇಶ್ವರಿ ರಥೋತ್ಸವ ನಡೆಯಲಿದೆ. ನಂತರ ಮಂಟಪೋತ್ಸವ, ಸಾಯಂಕಾಲ ಸಿಂಹಾವನೋತ್ಸವ ಹಂಸವಾಹನೋತ್ಸವ ನಡೆಯಲಿದೆ.
ಅಕ್ಟೋಬರ್ 15 ರಂದು ಆಶ್ವಯುಜ ಶುಕ್ಲ ಕೃಷ್ಣ ದ್ವತೀಯ ಅಶ್ವಿನಿ ನಕ್ಷತ್ರದಲ್ಲಿ ಬೆಳಗ್ಗೆ ವಸಂತ ಪೂಜೆ ಅವಭೃತ ತೀರ್ಥಸ್ನಾನ, ಮಂಟಪೋತ್ಸವ ನಡೆಯಲಿದೆ ನಂತರ ದೇವಿಕೆರೆಯಲ್ಲಿ ಸಂಜೆ 6.30ಕ್ಕೆ ತೆಪ್ಪೋತ್ಸವ ವಿಜೃಂಭಣೆಯಿಂದ ನಡೆಯಲಿದೆ.