ಮೈಸೂರು: ಗಗನಕ್ಕೇರಿದ ಬೆಲೆಯಿಂದ ಗ್ರಾಹಕರು ಮಾರುಕಟ್ಟೆ ಬಳಿ ನಿರೀಕ್ಷಿತ ಸಂಖ್ಯೆಯಲ್ಲಿ ಸುಳಿಯದೇ ಇರುವುದರಿಂದ, ಬಂಡವಾಳ ಹಾಕಿದ್ಧ ವ್ಯಾಪಾರಿಗಳು ಕಣ್ಣು ಬಾಯಿ ಬಿಡುವಂತಾಗಿದೆ.
ಕೊರೊನಾ ಭೀತಿ ನಡುವೆ ಗಗನಕ್ಕೇರಿದ ಬೆಲೆ : ನಿರೀಕ್ಷಿತ ಗಿರಾಕಿಗಳಿಲ್ಲದೇ ವ್ಯಾಪಾರಿಗಳು ಕಂಗಾಲು
ಕೊರೊನಾ ಹಿನ್ನೆಲೆ ಹಬ್ಬಕ್ಕೆ ವಸ್ತುಗಳನ್ನು ಕೊಳ್ಳಲು ಜನ ಮಾರುಕಟ್ಟೆಗೆ ಬರಲು ಹಿಂದೇಟು ಹಾಕುತ್ತಿದ್ದು, ಹಬ್ಬದ ವ್ಯಾಪಾರಕ್ಕೆಂದು ಸಾವಿರಾರು ರೂಪಾಯಿ ಬಂಡವಾಳ ಹಾಕಿದವರು ನಷ್ಟ ಅನುಭವಿಸುವಂತಾಗಿದೆ.
ಹೆಚ್ಚಿನ ಗಿರಾಕಿಗಳಿಲ್ಲದೇ ವ್ಯಾಪಾರಸ್ಥರು ಕಂಗಾಲು
ಯುಗಾದಿ ಹಬ್ಬಕ್ಕೆ ದೇವರಾಜ ಮಾರುಕಟ್ಟೆ ಹಾಗೂ ಜೆ.ಕೆ. ಮೈದಾನದಲ್ಲಿ ಹೂ ಖರೀದಿಗೆ ಜನಜಂಗುಳಿ ಇರಲಿದೆ ಎಂದು ವ್ಯಾಪಾರಿಗಳು ಭಾವಿಸಿದ್ದರು. ಆದರೆ, ಕೊರೊನಾ ಎರಡನೇ ಅಲೆ ಹೆಚ್ಚಾಗುತ್ತಿರುವ ಹಿನ್ನೆಲೆ ಗ್ರಾಹಕರೇ ಸ್ವಲ್ಪ ದೂರ ಉಳಿದಿರುವುದರಿಂದ ವ್ಯಾಪಾರಿಗಳಿಗೆ ಬೇಸರ ಮೂಡಿಸಿದೆ.
ದೇವರಾಜ ಮಾರುಕಟ್ಟೆಯಿಂದ ಹೂ ವ್ಯಾಪಾರ ಸ್ಥಳವನ್ನ, ಮಹಾನಗರ ಪಾಲಿಕೆಯು ಜೆ.ಕೆ. ಮೈದಾನಕ್ಕೆ ಸ್ಥಳಾಂತರ ಮಾಡಿದೆ. ಆದರೆ, ಕೊರೊನಾ ಆತಂಕದಿಂದ ಹೂ ಖರೀದಿಸಲು ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಬಾರದೇ ಇದ್ದುದರಿಂದ ಬಂಡವಾಳ ಹಾಕಿದ ಹೂ ವ್ಯಾಪಾರಿಗಳು ಪೆಚ್ಚಾಗಿದ್ದಾರೆ.