ಮೈಸೂರು: ಹುಲಿ ಘರ್ಜನೆಗೆ ಇತರೆ ಪ್ರಾಣಿಗಳು ದಿಕ್ಕಾಪಾಲಾಗಿ ಓಡುತ್ತವೆ ಎಂಬುವುದನ್ನು ನಾವು ಕೇಳಿದ್ದೇವೆ. ಆದರೆ, ಇದಕ್ಕೆ ತದ್ವಿರುದ್ಧವಾದ ಘಟನೆ ಜಿಲ್ಲೆಯಲ್ಲಿ ನಡೆದಿದೆ.
VIDEO: ಕರಡಿ ಮುಂದೆ ಮಂಕಾದ ಹುಲಿ - Nagarahole reserve forest
ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಟೈಗರ್ ರಸ್ತೆಯಲ್ಲಿ ಸಫಾರಿಗೆ ಹೋದ ಪ್ರವಾಸಿಗರು ಬಲು ಅಪರೂಪದ ಕ್ಷಣಗಳನ್ನು ಕಣ್ತುಂಬಿಕೊಂಡಿದ್ದಾರೆ.
ಜಾಂಬವಂತನ ಮುಂದೆ ಶರಣಾದ ವ್ಯಾಘ್ರ..
ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಟೈಗರ್ ರಸ್ತೆಯಲ್ಲಿ ಸಫಾರಿಗೆ ಹೋದ ಪ್ರವಾಸಿಗರು ಬಲು ಅಪರೂಪದ ಕ್ಷಣಗಳನ್ನು ಕಣ್ತುಂಬಿಕೊಂಡಿದ್ದಾರೆ. ಮುಂದೆ ಹೋಗುತ್ತಿದ್ದ ಹುಲಿಯನ್ನು ಬೆನ್ನಟ್ಟಿದ ಕರಡಿ ಗುದ್ದಾಟಕ್ಕೆ ಕರೆದಿದೆ. ಆದರೆ, ವ್ಯಾಘ್ರ ಮಾತ್ರ ತನ್ನ ಆಕ್ರೋಶ ತೋರಿಸದೆ ಶಾಂತವಾಗಿ ಕುಳಿತಿದೆ. ಹುಲಿ ಮೌನವಾದಾಗ ಕರಡಿ ತನ್ನ ದಾರಿಯತ್ತ ಹೊರಟಿದೆ.
ಓದಿ:ಬೆಂಗಳೂರಲ್ಲಿ ಮೆಟ್ರೋ ಸೆಗ್ಮೆಂಟ್ಸ್ ಜೋಡಿಸುವ ಮಷಿನ್ ಅರ್ಧಕ್ಕೆ ಕಟ್... ತಪ್ಪಿದ ಅನಾಹುತ