ಕರ್ನಾಟಕ

karnataka

ETV Bharat / state

ಹೋಂ ಐಸೋಲೇಷನಲ್ಲಿರೋರಿಗೆ ಟ್ಯಾಬ್ಲೆಟ್ ಕೊರತೆ ಇದೆ: ಜಿ.ಟಿ ದೇವೇಗೌಡ

ಕೊರೊನಾಗೆ ತುತ್ತಾಗಿ ಹೋಂ ಐಸೋಲೇಷನ್​ನಲ್ಲಿರುವವರಿಗೆ ಮಾತ್ರೆ, ಮಾಸ್ಕ್ ಹಾಗೂ ಸ್ಯಾನಿಟೈಸರ್ ಕೊರತೆ ಹೆಚ್ಚಾಗಿದೆ ಎಂದು ಮೈಸೂರು ಜಿಲ್ಲೆಯ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಆತಂಕ ವ್ಯಕ್ತಪಡಿಸಿದ್ದಾರೆ.

GT Devegowda
ಜಿ.ಟಿ ದೇವೇಗೌಡ

By

Published : May 17, 2021, 10:04 PM IST

ಮೈಸೂರು:ಹೋಂ ಐಸೋಲೇಷನ್​ನಲ್ಲಿರುವವರಿಗೆ ಮಾತ್ರೆ, ಮಾಸ್ಕ್ ಹಾಗೂ ಸ್ಯಾನಿಟೈಸರ್ ಕೊರತೆ ಹೆಚ್ಚಾಗಿದೆ ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಆತಂಕ ವ್ಯಕ್ತಪಡಿಸಿದ್ದಾರೆ.

ಜಿ.ಟಿ ದೇವೇಗೌಡ

ಚಾಮುಂಡೇಶ್ವರಿ ಕ್ಷೇತ್ರದ ಕೋವಿಡ್ ನಿಯಂತ್ರಣ ಸಂಬಂಧ ಸಭೆಯಲ್ಲಿ ಮಾತನಾಡಿದ ಅವರು, ಟೆಲಿಮೆಡಿಷನ್ ಬಳಸುವ ಮಾಹಿತಿ ಕೊರತೆ ಇದೆ. ನೋಡಲ್ ಅಧಿಕಾರಿಗಳು ಇದರ ಬಗ್ಗೆ ಗಮನಹರಿಸಬೇಕು. ಕರಪತ್ರ ಹಂಚುವ ಮೂಲಕ ಟೆಲಿಮೆಡಿಷನ್ ಹಾಗೂ ಮಾತ್ರೆ ಸೇವನೆ ಬಗ್ಗೆ ಅರಿವು ಮೂಡಿಸಿ ಎಂದರು.

ಓದಿ:ಕುಟುಂಬಸ್ಥರು ಹುಷಾರು ತಪ್ಪಿದರು ಜೇಬಲ್ಲಿ ನಯಾಪೈಸಾ ಇಲ್ಲ: ಕೂಲಿ ಕಾರ್ಮಿಕರ ಕಣ್ಣೀರು

ಗ್ರಾಮೀಣ ಭಾಗಗಳಲ್ಲಿ ಆಶಾ ಕಾರ್ಯಕರ್ತೆಯರು ಹಾಗೂ ಪಿಡಿಒಗಳ ಮೂಲಕ ಹೋಂ ಐಸೋಲೇಷನ್​ನಲ್ಲಿರುವವರನ್ನು‌ ಮಾನಿಟರ್ ಮಾಡಿ. ಕೊರೊನಾ ಸೋಂಕಿತರಿಗೆ ಅಭಯ‌ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ABOUT THE AUTHOR

...view details