ಕರ್ನಾಟಕ

karnataka

By

Published : Jun 11, 2021, 9:48 AM IST

ETV Bharat / state

ಒಂದು ಕೋಟಿ ದಾಟಿದ ದೇಣಿಗೆ ಮೊತ್ತ: ನಟ ದರ್ಶನ್‌ಗೆ ಮೃಗಾಲಯ ಪ್ರಾಧಿಕಾರ ಧನ್ಯವಾದ

ಕೆಲವು ದಿನಗಳ ಹಿಂದೆ ಮೃಗಾಲಯ ಪ್ರಾಧಿಕಾರವು ತನ್ನ ಸಂಕಷ್ಟದ ಬಗ್ಗೆ ನಟ‌ ದರ್ಶನ್ ಬಳಿ ಹೇಳಿಕೊಂಡಿತ್ತು. ನಂತರ ಈ ಬಗ್ಗೆ ದರ್ಶನ್ ವಿಡಿಯೋ ಮಾಡಿ ಪ್ರಾಣಿ-ಪಕ್ಷಿಗಳನ್ನು ದತ್ತು ಸ್ವೀಕರಿಸಿ ಮೃಗಾಲಯಗಳಿಗೆ ನೆರವು ನೀಡಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದರು.

actor darshan
actor darshan

ಮೈಸೂರು: ಪ್ರಾಣಿ-ಪಕ್ಷಿಗಳ ದತ್ತು ಸ್ವೀಕಾರ ಯೋಜನೆಯಡಿ ಪ್ರಾಣಿಪ್ರಿಯರಿಂದ ಒಂದೇ ವಾರದಲ್ಲಿ ರಾಜ್ಯದ ಮೃಗಾಲಯಗಳಿಗೆ 1 ಕೋಟಿ ರೂ ಬಂದಿದ್ದು, ನಟ ದರ್ಶನ್‌ ಅವರಿಗೆ ಕ‌ರ್ನಾಟಕ ಮೃಗಾಲಯ ಪ್ರಾಧಿಕಾರ ಧನ್ಯವಾದ ತಿಳಿಸಿದೆ. ಪ್ರಾಧಿಕಾರದ ಕರೆಗೆ ಓಗೊಟ್ಟು, ಮೃಗಾಲಯದ ಪ್ರಾಣಿಗಳನ್ನು ದತ್ತು ಪಡೆಯಿರಿ ಎಂಬ ದರ್ಶನ್ ಮನವಿಗೆ ಭಾರಿ ಬೆಂಬಲ ವ್ಯಕ್ತವಾಗಿದ್ದು, ಕಳೆದ ಆರು ದಿನದಲ್ಲಿ ಒಂದು ಕೋಟಿ ರೂಪಾಯಿಗೂ ಮೀರಿ ಹಣ ಹರಿದುಬಂದಿದೆ.

ಮೃಗಾಲಯ ಪ್ರಾಧಿಕಾರದ ಟ್ವೀಟ್‌

ಕೆಲವು ದಿನಗಳ ಹಿಂದೆ ಮೃಗಾಲಯ ಪ್ರಾಧಿಕಾರವು ತನ್ನ ಸಂಕಷ್ಟದ ಬಗ್ಗೆ ನಟ‌ ದರ್ಶನ್ ಬಳಿ ಹೇಳಿಕೊಂಡಿತ್ತು. ನಂತರ ಈ ಬಗ್ಗೆ ದರ್ಶನ್ ವಿಡಿಯೋ ಮಾಡಿ ಪ್ರಾಣಿ-ಪಕ್ಷಿಗಳನ್ನು ದತ್ತು ಸ್ವೀಕರಿಸಿ ಮೃಗಾಲಯಗಳಿಗೆ ನೆರವು ನೀಡಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದರು. ಇದಾದ ಮೇಲೆ ಜೂ ಆ್ಯಪ್‌ ಹಾಗೂ ಮೃಗಾಲಯಕ್ಕೆ ಹಲವರು ಭೇಟಿ ನೀಡಿದ್ದು ಪ್ರಾಣಿಗಳನ್ನು ದತ್ತು ಸ್ವೀಕರಿಸಿದ್ದಾರೆ.

ರಾಜ್ಯದ ಮೃಗಾಲಯಗಳಿಗೆ ಹರಿದು ಬಂದ ಧನ ಸಹಾಯದ ವಿವರ

ಮೈಸೂರು ಮೃಗಾಲಯ- 51,76,700 ರೂ, ಬನ್ನೇರುಘಟ್ಟ -29,83,000 ರೂ, ಶಿವಮೊಗ್ಗ-7,24,800 ರೂ, ಗದಗ-2,66,400 ರೂ, ಹಂಪಿ-2,42,200 ರೂ, ಬೆಳಗಾವಿ-2,22,300 ರೂ, ದಾವಣಗೆರೆ- 1,94,900 ರೂ, ಚಿತ್ರದುರ್ಗ-1,49,300 ರೂ, ಕಲಬುರ್ಗಿ-83,300 ರೂ ಸೇರಿದಂತೆ ಒಟ್ಟು -1,00,47,900 ರೂ. ಸಂಗ್ರಹವಾಗಿದೆ.

ಇದನ್ನೂ ಓದಿ:ತೆಲುಗು ಕಿರುತೆರೆಗೆ ಎಂಟ್ರಿ ಕೊಟ್ಟ ಕನ್ನಡದ ‘ಕುಲವಧು’ ಹುಡುಗ

ABOUT THE AUTHOR

...view details