ಕರ್ನಾಟಕ

karnataka

ETV Bharat / state

ಈಡೇರಿತು ದಾದಾ ಅಭಿಮಾನಿಗಳ ಬಹುವರ್ಷಗಳ ಬೇಡಿಕೆ: ವಿಷ್ಣು ಸ್ಮಾರಕಕ್ಕೆ ಸಿದ್ಧವಾಗ್ತಿದೆ ನಿವೇಶನ

ಡಾ.ವಿಷ್ಣುವರ್ಧನ್ ಸ್ಮಾರಕವನ್ನು ಹುಟ್ಟೂರಿನಲ್ಲಿ ನಿರ್ಮಿಸಲು ಕೋರ್ಟ್​ ಗ್ರೀನ್​ ಸಿಗ್ನಲ್​ ನೀಡಿದೆ. ಸ್ಮಾರಕ ನಿರ್ಮಾಣಕ್ಕಾಗಿ ನಿವೇಶನವನ್ನು ಸ್ವಚ್ಛಗೊಳಿಸಲಾಗುತ್ತಿದೆ.

By

Published : Jul 1, 2019, 2:00 PM IST

ವಿಷ್ಣು ಸ್ಮಾರಕಕ್ಕೆ ಸಿದ್ಧವಾಯ್ತು ನಿವೇಶನ

ಮೈಸೂರು:ಸಾಹಸಸಿಂಹ, ದಿವಂಗತ ಡಾ.ವಿಷ್ಣುವರ್ಧನ್ ಸ್ಮಾರಕವನ್ನು ಹುಟ್ಟೂರಿನಲ್ಲಿ ನಿರ್ಮಿಸಬೇಕೆಂಬ ಅಭಿಮಾನಿಗಳ ಬಹುವರ್ಷಗಳ ಬೇಡಿಕೆ ಕೊನೆಗೂ ಈಡೇರಿದೆ. ಈ ಮೂಲಕ ಭಾರತಿ ವಿಷ್ಣುವರ್ಧನ್ ಹೋರಾಟ ಕೈಗೂಡಿದೆ.

ವಿಷ್ಣು ಸ್ಮಾರಕಕ್ಕೆ ಸಿದ್ಧವಾಯ್ತು ನಿವೇಶನ

ಉದ್ಬೂರು ಗೇಟ್ ಬಳಿ ಇರುವ ಹಾಲಾಳು ಗ್ರಾಮದಲ್ಲಿ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ಮಾಡುವಂತೆ 10 ವರ್ಷಗಳ ಹಿಂದೆ ಭಾರತಿ ವಿಷ್ಣುವರ್ಧನ್ ಅವರು ಸರ್ಕಾರಕ್ಕೆ ಮನವಿ ಮಾಡಿದ್ದರು. ಸರ್ಕಾರವು 5 ಎಕರೆ ಪ್ರದೇಶವನ್ನು ಸ್ಮಾರಕ ನಿರ್ಮಾಣಕ್ಕೆ ನೀಡಿತ್ತು. ಜಮೀನಿನಲ್ಲಿ ಹಲವು ವರ್ಷಗಳ ಕಾಲ ಉಳುಮೆ ಮಾಡುತ್ತಿದ್ದ ಕೃಷಿಕರು ಜಮೀನು ಬಿಡಲು ಸಾಧ್ಯವಿಲ್ಲವೆಂದು ಕೋಟ್೯ ಮೆಟ್ಟಿಲೇರಿದ್ದರು. ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯವು ಭಾರತಿ ಅವರ ಪರವಾಗಿ ತೀರ್ಪು ನೀಡಿರುವುದರಿಂದ ವಿಷ್ಣುವರ್ಧನ್ ಸ್ಮಾರಕಕ್ಕೆ ಅಡತಡೆಗಳು ನಿವಾರಣೆಯಾಗಿವೆ. ವಿಷ್ಣು ಸ್ಮಾರಕ ನಿರ್ಮಾಣ ಕಾಮಗಾರಿಗಾಗಿ ನಿವೇಶನವನ್ನು ಸಸ್ವಚ್ಛಗೊಳಿಸಲಾಗುತ್ತಿದೆ.

ಈ ಕುರಿತು ಮಾತನಾಡಿರುವ ತಹಶಿಲ್ದಾರ್​ ಅವರು ಕೋರ್ಟ್​ ಆದೇಶದಂತೆ ಸ್ಮಾರಕ ನಿರ್ಮಾಣಕ್ಕೆ ಸಿದ್ಧತೆ ನಡೆಸಲಾಗುತ್ತಿದೆ. ಪೊಲೀಸ್​ ಭದ್ರತೆಯಲ್ಲಿ ಕೆಲಸ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ABOUT THE AUTHOR

...view details