ಮೈಸೂರು:ಪೊಲೀಸ್ಕಾನ್ಸ್ಟೇಬಲ್ವೊಬ್ಬರುನನ್ನನ್ನು ನಾಲ್ಕು ವರ್ಷಗಳ ಕಾಲಪ್ರೀತಿಸಿ, ಮದುವೆಯಾಗುವುದಾಗಿ ನಂಬಿಸಿಇದೀಗಮೋಸ ಮಾಡಿದ್ದಾರೆ ಎಂದು ಆರೋಪಿಸಿರುವ ವಿದ್ಯಾರ್ಥಿನಿ ಮೈಸೂರು ಜಿಲ್ಲಾ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಕಾನ್ಸ್ಟೇಬಲ್ ರಂಗಸ್ವಾಮಿ ಮತ್ತು ಆತನ ಕುಟುಂಬದ ವಿರುದ್ಧ ದೂರು ನೀಡಿದ್ದು, ಮದುವೆ ಮಾಡಿಕೊಳ್ಳುವಂತೆ ಬಲವಂತ ಮಾಡಿದರೆ ಕೊಲೆ ಮಾಡುವುದಾಗಿ ರಂಗಸ್ವಾಮಿ ಹಾಗೂ ಅವರ ಸ್ನೇಹಿತರು ನನಗೆ ಬೆದರಿಕೆ ಹಾಕುತ್ತಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ದೂರಿನ ವಿವರ: ಪಿರಿಯಾಪಟ್ಟಣ ತಾಲೂಕಿನ ಆಲನಹಳ್ಳಿ ಗ್ರಾಮದ ನಾನು ಮತ್ತು ಅದೇ ಗ್ರಾಮದ ಕಾನ್ಸ್ಟೇಬಲ್ ರಂಗಸ್ವಾಮಿ ಕಳೆದ ಹಲವು ದಿನಗಳಿಂದ ಪರಸ್ಪರ ಪ್ರೀತಿಸುತ್ತಿದ್ದೆವು. ನಾನು ಬಿಎಸ್ಸಿ ಅಂತಿಮ ವರ್ಷ ವ್ಯಾಸಂಗ ಮಾಡುತ್ತಿದ್ದು ರಂಗಸ್ವಾಮಿ ತನ್ನನ್ನು ಮದುವೆ ಆಗುವುದಾಗಿಯೂ ಹೇಳಿದ್ದರು. ಆದರೆ, ಈ ನಡುವೆ ನನ್ನ ಮನೆಯವರು ಬೇರೆ ಹುಡುಗನ ಜೊತೆ ನಿಶ್ಚಿತಾರ್ಥ ನಿಶ್ಚಯ ಮಾಡಿದ್ದರು. ಆಗ ರಂಗಸ್ವಾಮಿಯವರೇ ಮಧ್ಯಪ್ರವೇಶಿಸಿ ತನ್ನನ್ನೇ ಮದುವೆಯಾಗುವುದಾಗಿ ಹೇಳಿದ್ದರು. ನಮ್ಮ ಪ್ರೀತಿಯ ವಿಚಾರ ತಿಳಿದಿದ್ದರಿಂದ ನಿಶ್ಚಿತಾರ್ಥ ಕೂಡ ನಿಲ್ಲಿಸಲಾಗಿತ್ತು. ಆದರೆ, ಮದುವೆಯಾಗುವುದಾಗಿ ಹೇಳಿದ್ದ ರಂಗಸ್ವಾಮಿ ಇದೀಗ ನನಗೆ ಸಿಗುತ್ತಿಲ್ಲ. ಸರಿಯಾಗಿ ಮಾತನಾಡುತ್ತಿಲ್ಲ. ನಮ್ಮ ಮದುವೆ ಬಗ್ಗೆ ಕೇಳಿದರೆ ಬೆದರಿಕೆ ಹಾಕುತ್ತಿದ್ದಾರೆಂದು ವಿದ್ಯಾರ್ಥಿನಿ ದೂರಿನಲ್ಲಿ ಆರೋಪಿಸಿದ್ದಾರೆ.