ಕರ್ನಾಟಕ

karnataka

ETV Bharat / state

ಕೊರೊನಾ ಗೆದ್ದ ಮೈಸೂರಿಗೆ ನನ್ನ ಕೋಟಿ ನಮನಗಳು: ಎಸ್.ಟಿ ಸೋಮಶೇಖರ್ - ST Somashekar news

ತಬ್ಲಿಘಿ ಹಾಗೂ ನಂಜನಗೂಡಿನ ಜುಬಿಲಂಟ್​​​ ಕಾರ್ಖಾನೆಯಿಂದ 90 ಕೊರೊನಾ ಪಾಸಿಟಿವ್ ಪ್ರಕರಣಗಳಿಂದ ರೆಡ್​ಝೋನ್​ನಲ್ಲಿ ಇದ್ದ ಮೈಸೂರಿನಲ್ಲಿ ಈಗ ಸೋಂಕಿತರೆಲ್ಲ ಗುಣಮುಖರಾಗಿ ಮನೆಗೆ ಮರಳಿದ್ದಾರೆ.

ST Somashekar
ಕೊರೊನಾ ಗೆದ್ದ ಮೈಸೂರಿಗೆ ನನ್ನ ಕೋಟಿ ನಮನಗಳು: ಎಸ್.ಟಿ ಸೋಮಶೇಖರ್

By

Published : May 15, 2020, 9:29 PM IST

Updated : May 15, 2020, 9:48 PM IST

ಮೈಸೂರು: ಕೊರೊನಾವನ್ನ ಗೆದ್ದ ಮೈಸೂರಿಗೆ ನನ್ನ ಕೋಟಿ ನಮನಗಳು ಎಂದು ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಅಭಿನಂದನೆ ಸಲ್ಲಿಸಿದ್ದಾರೆ.

ತಬ್ಲಿಘಿ ಹಾಗೂ ನಂಜನಗೂಡಿನ ಜುಬಿಲಂಟ್ ಕಾರ್ಖಾನೆಯಿಂದ 90 ಕೊರೊನಾ ಪಾಸಿಟಿವ್ ಪ್ರಕರಣಗಳಿಂದ ರೆಡ್​ ಝೋನ್​ನಲ್ಲಿ ಇದ್ದ ಮೈಸೂರಿನಲ್ಲಿ ಈಗ ಸೋಂಕಿತರೆಲ್ಲ ಗುಣಮುಖರಾಗಿ ಮನೆಗೆ ಮರಳಿದ್ದು, ಇದರ ಹಿಂದೆ ಇದ್ದ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಂಡಕ್ಕೆ, ವೈದ್ಯರಿಗೆ, ನರ್ಸ್​ಗಳಿಗೆ, ಆಶಾ ಕಾರ್ಯಕರ್ತೆಯರಿಗೆ ಹಾಗೂ ಪತ್ರಕರ್ತರಿಗೆ ನನ್ನ ಅಭಿನಂದನೆಗಳು ಮುಖ್ಯವಾಗಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಬರಲು ಕಾರಣರಾದ ಮೈಸೂರು ಜಿಲ್ಲೆಯ ಜನರಿಗೆ ನನ್ನ ಅಭಿನಂದನೆಗಳು ಎಂದು ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಅಭಿನಂದನೆ ಸಲ್ಲಿಸಿದ್ದಾರೆ.

Last Updated : May 15, 2020, 9:48 PM IST

ABOUT THE AUTHOR

...view details