ಚಿರತೆಯ ಚಲನಚಲನ ಗ್ರಾಮಸ್ಥರ ಮೊಬೈಲ್ನಲ್ಲಿ ಸೆರೆ ಮೈಸೂರು: ಟಿ ನರಸೀಪುರ ತಾಲೂಕಿನ ಗ್ರಾಮಗಳಲ್ಲಿ ನರ ಹಂತಕ ಚಿರತೆ ದಾಳಿ ಮುಂದುವರೆದಿದ್ದು, ಗ್ರಾಮಕ್ಕೆ ನುಗ್ಗಿ ನಾಯಿಯನ್ನು ಕೊಂದು ಹಾಕಿರುವ ಘಟನೆ ನಡೆದಿದೆ.
ಈಗಾಗಲೇ ಇಬ್ಬರನ್ನೂ ಬಲಿ ಪಡೆದಿರುವ ಚಿರತೆ ಸೆರೆಗೆ ಅರಣ್ಯ ಇಲಾಖೆಯ 120 ಸಿಬ್ಬಂದಿ ಒಳಗೊಂಡ 10ಕ್ಕೂ ಹೆಚ್ಚು ತಂಡಗಳು ಡ್ರೋನ್ ಕ್ಯಾಮೆರಾ ಹಾಗೂ ಬೋನ್ಗಳನ್ನ ಬಳಸಿ ಕಾರ್ಯಾಚರಣೆ ನಡೆಸುತ್ತಿದ್ದರೂ ಚಿರತೆ ಇನ್ನೂ ಸೆರೆ ಸಿಕ್ಕಿಲ್ಲ. ತಾಲೂಕಿನ ಮುತ್ತತ್ತಿ ಗ್ರಾಮಕ್ಕೆ ನುಗ್ಗಿ ನಾಯಿಯನ್ನು ಕೊಂದು ಹಾಕಿರುವು ಚಿರತೆ ನುಗ್ಗನಹಳ್ಳಿ ಕೊಪ್ಪಲು, ಕೆಬ್ಬೆಹುಂಡಿ ಗ್ರಾಮಗಳಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿದೆ.
ಕಾರ್ಯಾಚರಣೆ ವಿಫಲ:ಕಳೆದ 15 ದಿನಗಳಿಂದ ಚಿರತೆ ಸೆರೆಗೆ ಕಾರ್ಯಾಚರಣೆ ನಡೆಸುತ್ತಿರುವ ಅರಣ್ಯ ಇಲಾಖೆ ಸಿಬ್ಬಂದಿಗೆ ಹಾಗೂ ಡ್ರೋನ್ ಕ್ಯಾಮೆರಾಗಳಿಗೆ ಕಾಣಿಸಿಕೊಳ್ಳದ ಚಿರತೆಯ ಓಡಾಟದ ದೃಶ್ಯಗಳು ಗ್ರಾಮಸ್ಥರ ಮೊಬೈಲ್ನಲ್ಲಿ ಸೆರೆಯಾಗಿವೆ. ಅರಣ್ಯ ಇಲಾಖೆ ಸರಿಯಾಗಿ ಕಾರ್ಯಾಚರಣೆ ಮಾಡುತ್ತಿಲ್ಲ ಎಂದು ಗ್ರಾಮಸ್ಥರು ಹಾಗೂ ಟಿ ನರಸೀಪುರ ಶಾಸಕರಾದ ಅಶ್ವಿನ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದಷ್ಟು ಬೇಗ ಚಿರತೆ ಸೆರೆ ಹಿಡಿಯಬೇಕೆಂದು ಅರಣ್ಯ ಇಲಾಖೆಗೆ ಒತ್ತಾಯಿಸಿದ್ದಾರೆ.
ಇದನ್ನೂ ಓದಿ:ನಾಗರಹೊಳೆ: ಅರಣ್ಯ ಇಲಾಖೆ ಕ್ಯಾಮರಾ ಕಣ್ಣಲ್ಲಿ ಸೆರೆಯಾದ ಕರಿ ಚಿರತೆ