ಕರ್ನಾಟಕ

karnataka

ETV Bharat / state

ರಂಜಾನ್‌ ನಿಮಿತ್ತ ಮೈಸೂರಿನ ಸಾಡೇ ರೋಡ್​ನಲ್ಲಿ ಭರ್ಜರಿ ವ್ಯಾಪಾರ - ರಂಜಾನ್‌ ಮಾಸ

ಮೈಸೂರಿನಲ್ಲಿ ರಂಜಾನ್‌ ಮಾಸದ ಹಿನ್ನೆಲೆಯಲ್ಲಿ ಬಗೆಬಗೆಯ ತಿನಿಸು ಹಾಗೂ ಗೃಹೋಪಯೋಗಿ ವಸ್ತುಗಳ ಮಾರಾಟ ಜೋರಾಗಿದೆ.

ರಂಜಾನ್‌ ಹಿನ್ನೆಲೆ ನಗರದ ಸಾಡೇ ರೋಡ್​ನಲ್ಲಿ ಭರ್ಜರಿ ವ್ಯಾಪಾರ

By

Published : May 28, 2019, 6:07 PM IST

ಮೈಸೂರು:ರಂಜಾನ್‌ ಮಾಸದ ಹಿನ್ನೆಲೆ ನಗರದ ಸಾಡೇ ರೋಡ್​ನಲ್ಲಿ ಬಗೆಬಗೆಯ ತಿನಿಸು ಹಾಗೂ ಗೃಹೋಪಯೋಗಿ ವಸ್ತುಗಳ ಮಾರಾಟ ಜೋರಾಗಿದೆ. ಉಪವಾಸ ಅಂತ್ಯಕ್ಕೆ ದಿನಗಣನೆ ಆರಂಭವಾಗಿದ್ದು, ನಗರದ ಸಾಡೇ ರೋಡ್​ನಲ್ಲಿ ಭರ್ಜರಿ ವಹಿವಾಟು ನಡೆಯುತ್ತಿದೆ.

ಹೊಸ ಹೊಸ ಅಂಗಡಿಗಳು ಒಂದೊಂದಾಗಿ ತೆರೆದುಕೊಳ್ಳುತ್ತಿದ್ದು, ಕುರ್ತಾ, ಟೋಪಿ, ಬಳೆ, ಬಟ್ಟೆ, ಚಪ್ಪಲಿ, ಇತರೆ ಗೃಹೋಪಯೋಗಿ ವಸ್ತುಗಳ ಖರೀದಿ ಜೋರಾಗಿದ್ದರಿಂದ ವ್ಯಾಪಾರಿಗಳು ಫುಲ್​ ಖುಷಿಯಲ್ಲಿದ್ದಾರೆ.

ರಂಜಾನ್‌ ಹಿನ್ನೆಲೆ ನಗರದ ಸಾಡೇ ರೋಡ್​ನಲ್ಲಿ ಭರ್ಜರಿ ವ್ಯಾಪಾರ

ರಂಜಾನ್‌ ಮಾಸ ಬಂದರೆ ಸಾಕು ಚಾಮರಾಜನಗರ, ಹುಣಸೂರು, ಕೆ.ಆರ್.ನಗರ, ಪಿರಿಯಾಪಟ್ಟಣ ಸೇರಿದಂತೆ ಇತರ ಪಟ್ಟಣಗಳಿಂದ ಗ್ರಾಹಕರ ದಂಡೇ ಇಲ್ಲಿಗೆ ಹರಿದು ಬರುತ್ತದೆ. ಹಾಗಾಗಿ ಸಾಡೇ ರೋಡ್​​ ಸಂಜೆ ಆಗುತ್ತಿದ್ದಂತೆ ಒಂದು ಹೆಜ್ಜೆ ಇಡಲು ಆಗದಷ್ಟು ಜನಸಂದಣಿ ಪ್ರದೇಶವಾಗಿರುತ್ತದೆ. ಬಿಸಿ ಬಿಸಿ ಸಮೋಸಾ, ದೋಸೆ, ಹಾಲು, ಖರ್ಜೂರ, ದ್ರಾಕ್ಷಿ ಸೇರಿದಂತೆ ಹಲವು ತಿಂಡಿ ತಿನಿಸುಗಳ ಭರ್ಜರಿ ವ್ಯಾಪಾರ ನಡೆಯುತ್ತದೆ.

ABOUT THE AUTHOR

...view details