ಕರ್ನಾಟಕ

karnataka

ETV Bharat / state

ಮೈಸೂರು: ಸಿಲ್ಕ್ ಫ್ಯಾಕ್ಟರಿ ಗುತ್ತಿಗೆ ನೌಕರರ ಪ್ರತಿಭಟನೆ - ಮೈಸೂರು ಪ್ರತಿಭಟನೆ ನ್ಯೂಸ್

ಅಶೋಕಪುರಂನಲ್ಲಿರುವ ಸಿಲ್ಕ್ ಫ್ಯಾಕ್ಟರಿಯಲ್ಲಿ ಸಭೆ ನಡೆಸಲು ಆಗಮಿಸಿದ ಸಚಿವ ಕೆ‌.ಸಿ. ನಾರಾಯಣಗೌಡರ ವಿರುದ್ಧ ಗುತ್ತಿಗೆ ನೌಕರರು ಪ್ರತಿಭಟನೆ ನಡೆಸುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

Protest from Silk Factory employees in mysore
ಮೈಸೂರು: ಸಿಲ್ಕ್ ಫ್ಯಾಕ್ಟರಿ ಗುತ್ತಿಗೆ ನೌಕರರ ಪ್ರತಿಭಟನೆ

By

Published : Oct 17, 2020, 1:45 PM IST

ಮೈಸೂರು: ಗುತ್ತಿಗೆ ನೌಕರರುಗಳಿಗೆ ಮಾನವೀಯ ನೆಲೆಯಲ್ಲಿ ಉದ್ಯೋಗ ನೀಡಿ ಎಂದು ನ್ಯಾಯಾಲಯ ಹೇಳಿದ್ರೂ ಕೂಡ ನೌಕರಿ ನೀಡುತ್ತಿಲ್ಲವೆಂದು ಅಸಮಾಧಾನಗೊಂಡಿರುವ ಗುತ್ತಿಗೆ ನೌಕರರು ತೋಟಗಾರಿಕೆ ಹಾಗೂ ರೇಷ್ಮೆ ಖಾತೆ ಸಚಿವ ಕೆ‌.ಸಿ. ನಾರಾಯಣಗೌಡ ವಿರುದ್ಧ ಪ್ರತಿಭಟನೆ ನಡೆಸಿದರು.

ಗುತ್ತಿಗೆ ನೌಕರರ ಪ್ರತಿಭಟನೆ

ಅಶೋಕಪುರಂನಲ್ಲಿರುವ ಸಿಲ್ಕ್ ಫ್ಯಾಕ್ಟರಿಯಲ್ಲಿ ಸಭೆ ನಡೆಸಲು ಆಗಮಿಸಿದ ಸಚಿವ ನಾರಾಯಣಗೌಡರ ಮುಂದೆ ಗುತ್ತಿಗೆ ನೌಕರರು ಪ್ರತಿಭಟನೆ ನಡೆಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಸಿಲ್ಕ್ ಫ್ಯಾಕ್ಟರಿಯ ವ್ಯವಸ್ಥಾಪಕರು ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸುತ್ತಿದ್ದಾರೆ. ಕೂಡಲೇ ಅವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿದರು.

ಈ ವೇಳೆ ನಾರಾಯಣಗೌಡ ಹಾಗೂ ಗುತ್ತಿಗೆ ನೌಕರನ ನಡುವೆ ಮಾತಿನ ಚಕಮಕಿ ನಡೆಯಿತು.

ABOUT THE AUTHOR

...view details